Tuesday, July 1, 2025
spot_imgspot_img
spot_imgspot_img

ಮತ್ತೊಮ್ಮೆ ಬೆಚ್ಚಿ ಬಿದ್ದ ಶಿವಮೊಗ್ಗ ಜನತೆ: ಹಾಡು ಹಗಲೇ ಹಿಂದೂ ಯುವಕನ ಮೇಲೆ ಅನ್ಯ ಕೋಮಿನ ಯುವಕರಿಂದ ಮಾರಣಾಂತಿಕ ಹಲ್ಲೆ..!

- Advertisement -
- Advertisement -

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಮ್ಮೆ ಶಿವಮೊಗ್ಗದಲ್ಲಿ ಜನ ಬೆಚ್ಚಿಬಿದ್ದಿದ್ದಾರೆ. ಅನ್ಯಕೋಮಿನ ಯುವಕರು ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

vtv vitla
vtv vitla

ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ಮಧು (21) ಎಂಬಾತನ ಮೇಲೆ ಅನ್ಯಕೋಮಿನ 6 ಯುವಕರ ತಂಡ ಹಲ್ಲೆ ನಡೆಸಿದ್ದಾರೆ. ಹೂವಿನ ವ್ಯಾಪಾರಿಯಾಗಿರುವ ಮಧು, ಮಂಡ್ಲಿ ಬಡಾವಣೆಯಲ್ಲಿ ಹೂವು ವಿತರಣೆಗೆ ಹೋಗಿದ್ದಾನೆ. ಈ ವೇಳೆ ಲಾಂಗು-ಮಚ್ಚು ಝಳಪಿಸುತ್ತ ಓಡಿಸಿಕೊಂಡು ಬಂದ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ.

ಮೊದಲೇ ಕಿಡ್ನಿ ಆಪರೇಷನ್ ಮಾಡಿಕೊಂಡಿರುವ ಯುವಕ ಮಧುಗೆ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.ಗಾಯಾಳು ಮಧುಗೆ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಹಿಂದೂಪರ ಸಂಘಟನೆ ಮುಖಂಡರ ಆಗ್ರಹ ಮಾಡಿದ್ದಾರೆ.

- Advertisement -

Related news

error: Content is protected !!