Monday, June 8, 2026
spot_imgspot_img
spot_imgspot_img

*ಎಸ್ ಡಿಪಿಐ ನಿಷೇಧಕ್ಕೆ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರ*

- Advertisement -
- Advertisement -

 ಕಾನೂನು ಇಲಾಖೆ ವರದಿ ಬಳಿಕ ಕೇಂದ್ರಕ್ಕೆ ಶಿಫಾರಸು

ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನಲೆಯಲ್ಲಿ ಎಸ್ ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾನೂನು ಇಲಾಖೆ ವರದಿ ಬಳಿಕ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎಸ್ ಡಿಪಿಐ ಗೆ ಕಡಿವಾಣ ಹಾಕದೇ ಇದ್ದರೆ ಮುಂದೆ ಉಳಿಗಾಲವಿಲ್ಲ. ಅವರ ಉಪಟಳ ಕಂಟ್ರೋಲ್ ಮಾಡಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಜನರನ್ನು ನೆಮ್ಮಿದಿಯಿಂದ ಬದುಕೋಕೆ ಬಿಡಲ್ಲ. ಎಸ್ ಡಿಪಿಐ ಬ್ಯಾನ್ ಶಿಫಾರಸಿಗೆ ದಾಖಲೆ ಕಲೆಹಾಕಿ ಪಕ್ಕಾ ವರದಿ ನೀಡುವಂತೆ ಕೇಳಲಾಗಿದೆ. ಕಾನೂನು ಮತ್ತು ಗೃಹ ಇಲಾಖೆ ವರದಿ ಬಳಿಕ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದರು.

- Advertisement -

Related news

error: Content is protected !!