Friday, May 3, 2024
spot_imgspot_img
spot_imgspot_img

ವಿಟ್ಲ: 2021-22 ನೇ ಆರ್ಥಿಕ ವರ್ಷದಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ 557 ಕೋಟಿ ವ್ಯವಹಾರ; 2.26 ಕೋಟಿ ಲಾಭ

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ 2021-22 ನೇ ಆರ್ಥಿಕ ವರ್ಷದಲ್ಲಿ ತನ್ನ ಕಾರ್ಯದಕ್ಷತೆಯನ್ನು ಮೆರೆದು ರೂ 2.26 ಕೋಟಿಗೂ ಮಿಕ್ಕಿ ಲಾಭಗಳಿಸಿ ವಿಶೇಷ ಸಾಧನೆಯನ್ನು ಮಾಡಿದೆ.

ಪ್ರಸ್ತುತ ಬಂಟ್ವಾಳ, ಮತ್ತೂರು, ಸುಳ್ಯ, ಕಡಬ, ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕಿನ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಬ್ಯಾಂಕ್ ವಿಟ್ಲದಲ್ಲಿ ಪ್ರಧಾನ ಕಛೇರಿ ಮತ್ತು ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡು ಹಾಗೂ ಮತ್ತೂರಿನಲ್ಲಿ ಶಾಖೆಗಳನ್ನು ಹೊಂದಿದ್ದು ಒಟ್ಟು 7193 ಮಂದಿ ಸದಸ್ಯರಿದ್ದು ರೂ. 2.38 ಕೋಟಿ ಪಾಲು ಬಂಡವಾಳವನ್ನು ಹೊಂದಿರುತ್ತದೆ.

ವರದಿ ವರ್ಷದಲ್ಲಿ ದಾಖಲೆಯ ರೂ. 557 ಕೋಟಿಗಳ ವ್ಯವಹಾರವನ್ನು ದಾಖಲಿಸಿ ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ 25 ಕೋಟಿ ರೂಪಾಯಿ ಹೆಚ್ಚಿನ ವ್ಯವಹಾರವನ್ನು ಮಾಡಿದೆ.

ಠೇವಣಿ ಸಂಗ್ರಹಣೆಯಲ್ಲಿ ತುಂಬಾ ಸ್ಪರ್ಧೆಗಳಿದ್ದರೂ ಬ್ಯಾಂಕ್ ರೂ.115,06 ಕೋಟಿ ರೂಪಾಯಿಗಳ ಠೇವಣಿ ಹೊಂದಿದ್ದು ಕಳೆದ ಸಾಲಿಗಿಂತ 8.93 ರಷ್ಟು ಹೆಚ್ಚಳವಾಗಿರುತ್ತದೆ, ಅಲ್ಲದೆ 64.67 ಕೋಟಿ ರೂಪಾಯಿಗಳ ಹೊರಬಾಕಿ ಸಾಲಗಳಿದ್ದು ಸಾಲ ವಸೂಲಾತಿಯೂ ಕಳೆದ ಸಾಲಿಗಿಂತ ಹೆಚ್ಚಾಗಿದ್ದು ಶೇಕಡಾ 91.08 ಆಗಿರುತ್ತದೆ. ಪ್ರಸ್ತುತ ಬ್ಯಾಂಕಿನಲ್ಲಿ 699 ಕೋಟಿ ರೂಪಾಯಿ ಮೀಸಲು ನಿಧಿಯಿದ್ದು ರೂ. 9.50 ಕೋಟಿಗಳ ಇತರ ನಿಧಿಗಳನ್ನು ಹೊಂದಿದ್ದು, ರೂ. 2.03 ಕೋಟಿಗಳ ಚರ ಹಾಗೂ ಸ್ಥಿರಾಸ್ತಿಗಳನ್ನು ಹೊಂದಿರುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳ ತರಗತಿಯಲ್ಲಿದೆ. 136 ಕೋಟಿಗಳಾಗಿರುತ್ತದೆ. ಬ್ಯಾಂಕ್ ಹಲವಾರು ವರ್ಷಗಳಿಂದ ಆಡಿಟ್ ವರ್ಗಿಕರಣದಲ್ಲಿ ‘ಎ’ ಗ್ರೇಡ್ ಪಡೆದಿದೆ.

31-03-2022 ಕ್ಕೆ ಬ್ಯಾಂಕಿನ ಪ್ರಧಾನ ಕಚೇರಿ ಹಾಗೂ ಶಾಖೆಗಳ ಸಾಧನೆಯ ಸಿಂಹಾವಲೋಕನ

ಪ್ರಧಾನ ಕಛೇರಿ : ಒಟ್ಟು ವ್ಯವಹಾರ 340 ಕೋಟಿಗಳಾಗಿದ್ದು ಠೇವಣಾತಿಯು 67.77 ಕೋಟಿ ರೂಪಾಯಿಗಳಾಗಿರುತ್ತದೆ. 21,78 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 90.89 ಆಗಿರುತ್ತದೆ, ಅಂದಾಜು 1.70 ಕೋಟಿ ಲಾಭಗಳಿಸಿರುತ್ತದೆ.

ಕನ್ಯಾನ ಶಾಖೆ : ಒಟ್ಟು ವ್ಯವಹಾರ 59.17 ಕೋಟಿಗಳಾಗಿದ್ದು ಠೇವಣಾತಿಯು 16.67 ಕೋಟಿ ರೂಪಾಯಿಗಳಾಗಿರುತ್ತದೆ. 252 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 96.52 ಆಗಿರುತ್ತದೆ, ಅಂದಾಜು ರೂ 13.50 ಲಕ್ಷ ಲಾಭಗಳಿಸಿರುತ್ತದೆ.

ಕಲ್ಲಡ್ಕ ಶಾಖೆ : ಒಟ್ಟು ವ್ಯವಹಾರ, 59,68 ಕೋಟಿಗಳಾಗಿದ್ದು ಶೇವಗಾತಿಯು 211 ಕೋಟಿ ರೂಪಾಯಿಗಳಾಗಿರುತ್ತದೆ. 13.15 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು, ವಸೂಲಾತಿಯು ಶೇಕಡಾ 9.0 ಆಗಿರುತ್ತದೆ. ಅಂದಾಜು ರೂ 33.27 ಲಕ್ಷ ಲಾಭಗಳಿಸಿರುತ್ತದೆ.

ಬಿ.ಸಿ.ರೋಡ್ ಶಾಖೆ : ಒಟ್ಟು ವ್ಯವಹಾರ 37.79 ಕೋಟಿಗಳಾಗಿದ್ದು ಠೇವಣಾತಿಯು 8.50 ರೂಪಾಯಿಗಳಾಗಿರುತ್ತದೆ. 7.61 ಕೋಟಿ ರೂಪಾಯಿಗಳ ಹೊರ ಬಾಕಿ ಸಲ ಇದ್ದು ವಸೂಲಾತಿಯು ಶೇಕಡಾ 90,89 ಆಗಿರುತ್ತದೆ. ಅಂದಾಜು ರೂ 4.62 ಲಕ್ಷ ಲಾಭಗಳಿಸಿರುತ್ತದೆ.

ಪುತ್ತೂರು ಶಾಖೆ : ಒಟ್ಟು ವ್ಯವಹಾರ 61.05 ಕೋಟಿಗಳಾಗಿದ್ದು, ಠೇವಣಾತಿಯು 13.09. ರೂಪಾಯಿಗಳಾಗಿರುತ್ತದೆ. 15,60 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 84,94 ಆಗಿರುತ್ತದೆ. ಆಂದಾಜು ರೂ 5.35 ಲಕ್ಷ ಲಾಭಗಳಿಸಿರುತ್ತದೆ.

2022-23 ನೇ ಸಾಲಿನಲ್ಲಿ ಬ್ಯಾಂಕು (585 ಕೋಟಿಗೂ ಮೀರಿದ ವ್ಯವಹಾರವನ್ನು, 120 ಕೋಟಿ ಮೇಲ್ಪಟ್ಟು ಠೇವಣಿ ಸಂಗ್ರಹಣಿ, ರೂ 70 ಕೋಟಿ ಸಾಲ ನೀಡಿಕೆ, 240 ಕೋಟಿಗೂ ಮೀರಿದ ಲಾಭವನ್ನು ಹಾಗೂ 96 ಶೇಕಡಾ ಸಾಲ ವಸೂಲಾತಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಬ್ಯಾಂಕು ಅನುಭವಿ ಆಡಳಿತ ಮಂಡಳಿಯನ್ನು ಹೊಂದಿದ್ದು, ಬ್ಯಾಂಕಿನ ಅಧ್ಯಕ್ಷರಾಗಿ ಹೆಚ್, ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷರಾಗಿ ಮೋಹನ್ ಕೆ. ಎಸ್, ನಿರ್ದೆಶಕರಾಗಿ ಎಂ, ಹರೀಶ್ ನಾಯಕ್, ಮನೋರಂಜನ್, ಕೆ.ಆರ್, ವಿಶ್ವನಾಥ್ ಎಂ. ಕೃಷ್ಣ .ಕೆ. ಉದಯಕುಮಾರ್, ಎ. ಬಾಲಕೃಷ್ಣ ಪಿ. ಎಸ್. ದಿವಾಕರ ವಿ. ದಯಾನಂದ ಆಳ್ವ ಕೆ, ಸುಂದರ ಬಿ. ಗೋವರ್ಧನ ಕುಮಾರ್, ಐ. ಶುಭಲಕ್ಷ್ಮಿ, ಜಯಂತಿ ಎಚ್ ರಾವ್ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾಂಕಿನಲ್ಲಿ 32 ನುರಿತ ಸಿಬ್ಬಂದಿಗಳಿದ್ದು ಇವರ ಪೂರ್ಣ ಪ್ರಮಾಣದ ಸಹಕಾರದೊಂದಿಗೆ ಕೃಷ್ಣ ಮುರಳಿ ಶ್ಯಾಮ್, ಕೆ. ಇವರು ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಬ್ಯಾಂಕನ್ನು ಅಭಿವೃದ್ಧಿ ಪಥ ದತ್ತ ಮುನ್ನಡೆಸುತ್ತಿದ್ದಾರೆ.

- Advertisement -

Related news

error: Content is protected !!