Thursday, October 29, 2026
spot_imgspot_img
spot_imgspot_img

ಹಿಜಾಬ್ ಧರಿಸಿದಕ್ಕೆ ಪರೀಕ್ಷೆ ಬರೆಯಲು ಬೀಡುತ್ತಿಲ್ಲ ಎಂದು ಕಣ್ಣೀರು ಹಾಕಿದ ವಿಧ್ಯಾರ್ಥಿನಿ

- Advertisement -
- Advertisement -

ಹಿಜಾಬ್ ಧರಿಸಿದ್ದಕ್ಕೆ ನನಗೆ ಪರೀಕ್ಷೆ ಬರೆಯಲು ಬೀಡುತ್ತಿಲ್ಲ ಎಂದು ವಿಧ್ಯಾರ್ಥಿನಿಯೊಬ್ಬಳು ಕಣ್ಣೀರು ಹಾಕಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನನ್ನ ಎಲ್ಲಾ ಸ್ನೇಹಿತರೂ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ನನಗೆ ಮಾತ್ರ ಹಿಜಾಬ್ ಧರಿಸಿದ್ದ ಕಾರಣ ಪರೀಕ್ಷೆ ಬರೆಯಲು ಬಿಡುತ್ತಿಲ್ಲ ಎಂದು ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ವೀಡಿಯೋ ಮೂಲಕ ಆಕ್ರೋಶ ಹೊರ ಹಾಕಿದ್ದಾಳೆ.

ಶಿವಮೊಗ್ಗ ಜಿಲ್ಲೆಯ ಡಿವಿಎಸ್ ಕಾಲೇಜಿನ ಕೊನೆಯ ವರ್ಷದ ಬಿಎ ವಿದ್ಯಾರ್ಥಿನಿ ಶಾಹಿನ್ ಪರೀಕ್ಷೆ ಬರೆಯಲು ಕಾಲೇಜಿಗೆ ತೆರಳಿದ್ದಳು. ಆದರೆ ನ್ಯಾಯಾಲಯದ ಆದೇಶದಂತೆ ಆಕೆ ಹಿಜಾಬ್ ಧರಿಸಿದ್ದ ಕಾರಣ ಪರೀಕ್ಷೆ ಬರೆಯಲು ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಿರಲಿಲ್ಲ. ಈ ಕಾರಣ ಶಾಹಿನ್ ತನ್ನ ಆಕ್ರೋಶವನ್ನು ವೀಡಿಯೋ ಮುಖಾಂತರ ಹೊರ ಹಾಕಿದ್ದಾಳೆ.

- Advertisement -

Related news

error: Content is protected !!