- Advertisement -
- Advertisement -
ನವದೆಹಲಿ:– ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿರುವ ರಾಷ್ಟ್ರಪಕ್ಷಿ ನವಿಲುಗಳಿಗೆ ಆಹಾರ ತಿನ್ನಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗಿನ ವಾಯು ವಿಹಾರದ ಕೆಲವು ದೃಶ್ಯಗಳುಳ್ಳ 1.47 ನಿಮಿಷಗಳ ಈ ವಿಡಿಯೋದಲ್ಲಿ ನವಿಲುಗಳಿಗೆ ಮೋದಿ ಅವರು ಕಾಳು ಹಾಕುತ್ತಿರುವ ದೃಶ್ಯಗಳಿವೆ.ಅಲ್ಲದೆ ತಮ್ಮ ನಿವಾಸದಿಂದ ಕಚೇರಿವರೆಗೆ ಬೆಳಗಿನ ವಾಯುವಿಹಾರದ ದೃಶ್ಯ ತುಣುಕುಗಳಿವೆ.
- Advertisement -