Saturday, August 8, 2026
spot_imgspot_img
spot_imgspot_img

ವಿಟ್ಲ: ಕಸ ಕೊಂಡೊಯ್ಯುವ ವಾಹನವನ್ನು ಸ್ವತಃ ತಾವೇ ಚಲಾಯಿಸಿ, ಮನೆ, ಅಂಗಡಿಗಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸಿ ಮಾದರಿಯಾದ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾ

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಗಡಿ ಪ್ರದೇಶದ ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನೆಫಿಸಾ ತಸ್ಲಿ (29) ಅವರು ಮಾದರಿ ಕೆಲಸಕ್ಕಾಗಿ ಸುದ್ದಿಯಾಗಿದ್ದಾರೆ.

ಕಸ ಕೊಂಡೊಯ್ಯುವ ವಾಹನವನ್ನು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಮನೆ, ಅಂಗಡಿಗಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುತ್ತಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 600 ಮನೆಗಳಿದ್ದು, ಪ್ರತಿ ಮನೆಯಿಂದ ವಾರಕ್ಕೆ ಎರಡು ಬಾರಿಯಾದರೂ ತ್ಯಾಜ್ಯ ಸಂಗ್ರಹವಾಗುವಂತೆ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ. ನಾಲ್ಕು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ವಾಹನ ಬಂದಿತ್ತು. ಗ್ರಾಮದ ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಮಹಿಳಾ ಚಾಲಕರನ್ನು ನೇಮಿಸಲು ತೀರ್ಮಾನಿಸಲಾಗಿತ್ತು.

ಅದರಂತೆ ನಿಯೋಜಿತ ಚಾಲಕಿ ಇನ್ನೂ ತರಬೇತಿ ಪಡೆದಿರಲಿಲ್ಲ. ನಾನು ಕಾರು ಚಲಾಯಿಸಿಕೊಂಡು ಕಚೇರಿಗೆ ಬರುತ್ತೇನೆ, ಡ್ರೈವಿಂಗ್ ನನಗೆ ಗೊತ್ತಿರುವ ಕಾರಣ ನಾನೇ ಏಕೆ ಇದನ್ನು ನಿರ್ವಹಿಸಬಾರದು ಎಂದು ಯೋಚಿಸಿ ಪಿಡಿಒ ಮತ್ತು ಇತರೆ ಸದಸ್ಯರ ಪ್ರೋತ್ಸಾಹದಿಂದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಈ ಬಗ್ಗೆ ಗ್ರಾ.ಪಂ ಉಪಾಧ್ಯಕ್ಷೆ ನೆಫಿಸಾ ಪ್ರತಿಕ್ರಿಯಿಸಿದ್ದಾರೆ.

- Advertisement -

Related news

error: Content is protected !!