Thursday, July 10, 2025
spot_imgspot_img
spot_imgspot_img

ವಿಟ್ಲ: ನಶೆಯಲ್ಲಿದ್ದ ಜೆಸಿಬಿ ಚಾಲಕನಿಂದ ಹೇಯ ಕೃತ್ಯ..! ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಎರಗಿದ ಜೆಸಿಬಿ- ಬಾಲಕ ಸ್ಪಾಟ್‌ ಡೆತ್‌; ಬಾಲಕನ ಶವ ಮತ್ತು ಸೈಕಲ್‌ಅನ್ನು ಜೆಸಿಬಿ ಕೊಕ್ಕಿನಿಂದ ದೂಡಿಹಾಕಿ ಪರಾರಿಯಾಗಲು ಯತ್ನ – ರೊಚ್ಚಿಗೆದ್ದ ಜನರಿಂದ ಬಿತ್ತು ಗೂಸಾ..!

- Advertisement -
- Advertisement -

ವಿಟ್ಲ: ಕನ್ಯಾನದ ಕಣಿಯೂರು ಎಂಬಲ್ಲಿನ ಉದ್ಯಮಿಯ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿ ಸೈಕಲ್ ಚಲಾಯಿಸುತ್ತಿದ್ದ ಬಾಲಕನ ಮೇಲೆ ಎರಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೆಸಿಬಿ ಚಲಾಯಿಸುತ್ತಿದ್ದ ವ್ಯಕ್ತಿ ನಶೆಯಲ್ಲಿದ್ದ ಎನ್ನಲಾಗಿದೆ. ಮೃತಪಟ್ಟ ಬಾಲಕನನ್ನು ೧೩ ವರ್ಷ ಪ್ರಾಯದ ಅಖಿಲ್ ಎಂದು ಗುರುತಿಸಲಾಗಿದೆ. ಜೆಸಿಬಿ ಚಾಲಕನನ್ನು ಗದಗ ಮೂಲದ ಸಾದಿಕ್ ಎಂದು ಗುರುತಿಸಲಾಗಿದೆ.

ಮೊದಲೇ ನಶೆಯಲ್ಲಿದ್ದ ಚಾಲಕ ತನ್ನ ನಿರ್ಲಕ್ಷ್ಯದ ಚಲಾವಣೆಯಿಂದ ಜೆಸಿಬಿ ಬಾಲಕನ ಮೇಲೆ ಎರಗಿದೆ. ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕನನ್ನು ಜೆಸಿಬಿ ಕೊಕ್ಕಿನಿಂದ ಪಕ್ಕಕ್ಕೆ ಸರಿಸಿ ತಾನೂ ಮಾಡಬೇಕಾದ ಕೆಲಸದ ಜಾಗಕ್ಕೆ ಹೋಗಿದ್ದಾನೆ. ಅಲ್ಲಿ ನಿಲ್ಲದ ಆಸಾಮಿ ಡ್ರೈವರ್‍, ಬೇರೊಬ್ಬ ಡ್ರೈವರ್‍ ಬರುತ್ತಾನೆಂದು ಹೇಳಿ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಈ ವಿಷಯ ಊರಿನವರಿಗೆ ತಿಳಿದು ಬಂದಿದೆ. ಉದ್ಯಮಿ ಹಾಗೂ ಊರವರು ಒಟ್ಟು ಸೇರಿ ಸಾದಿಕ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸ್ಥಳೀಯರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸಾದಿಕ್ ಹಾಗೂ ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

- Advertisement -

Related news

error: Content is protected !!