Saturday, August 8, 2026
spot_imgspot_img
spot_imgspot_img

ಉಡುಪಿ: ಸುಟ್ಟ ಕಾರಿನಲ್ಲಿ ಅರೆಬೆಂದ ಸ್ಥಿತಿಯ ಶವ ಪತ್ತೆ..! ಬೆಚ್ಚಿಬಿದ್ದ ಜನತೆ

- Advertisement -
- Advertisement -

ನಿರ್ಜನ ಪ್ರದೇಶದಲ್ಲಿ ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಉಡುಪಿಯ ಬೈಂದೂರು ಸಮೀಪದ ಹೇನ್ ಬೇರು ಎಂಬಲ್ಲಿ ಜು.12ರ ತಡರಾತ್ರಿ ವರದಿಯಾಗಿದೆ. ಕಾರಿನಲ್ಲಿದ್ದ ವ್ಯಕ್ತಿ ಸಮೇತ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.‌ ಕಾರಿನ ಹಿಂಬದಿ‌ ಸೀಟ್ ನಲ್ಲಿ ವ್ಯಕ್ತಿ ಇದ್ದು, ವ್ಯಕ್ತಿಯ ಶವ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಕಂಡು ಹಿಡಿಯಲಾಗದಷ್ಟು ಸುಟ್ಟಿದೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯೋ ಆತ್ಮಹತ್ಯೆಯೋ ತನಿಖೆಯ ಬಳಿಕವಷ್ಟೇ ಸತ್ಯ ಹೊರ ಬರಬೇಕಿದೆ. ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆಯ ಜೊತೆಗೆ ಪ್ರಕರಣ ಭೇದಿಸಲು ಪೊಲೀಸರು ಮುಂದಾಗಿದ್ದಾರೆ.

- Advertisement -

Related news

error: Content is protected !!