Saturday, June 28, 2025
spot_imgspot_img
spot_imgspot_img

ಮೈಸೂರು ಆರ್ ಎಸ್ ಎಸ್ ಕಚೇರಿಗೆ ಎಚ್.ವಿಶ್ವನಾಥ್ ಭೇಟಿ

- Advertisement -
- Advertisement -

ಮೈಸೂರು: ನಗರದ ಆರ್ ಎಸ್ ಎಸ್ ಕಚೇರಿಗೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗಮಿಸಿದ್ದಾರೆ. ಇದೇ ಮೊದಲ ಬಾರಿಗೆ ಆರ್ ಎಸ್ ಎಸ್ ಕಚೇರಿಗೆ ಎಚ್.ವಿಶ್ವನಾಥ್ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಸದ್ಯ ಆರ್ ಎಸ್ ಎಸ್ ನಾಯಕರ ಜತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಟಿಪ್ಪು ಮಣ್ಣಿನ ಎಂದು ಎಚ್.ವಿಶ್ವನಾಥ್ ನೀಡಿದ ಹೇಳಿಕೆ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಮತ್ತೊಂದುಕಡೆ ಸಂಪುಟ ವಿಸ್ತರಣೆ ಸಮಯದಲ್ಲಿ ಟಿಪ್ಪು ಪರ ಹೇಳಿಕೆ ನೀಡಿರುವ ಎಚ್.ವಿಶ್ವನಾಥ್ ಪೇಚಿಗೆ ಸಿಲುಕಿದ್ದಾರೆ. ಹೀಗಾಗಿ ಆರ್ ಎಸ್ ಎಸ್ ನಾಯಕರ ಜತೆ ಎಚ್.ವಿಶ್ವನಾಥ್ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!