- Advertisement -
- Advertisement -
ನೆಲಮಂಗಲ: ಅಸಭ್ಯ ವರ್ತನೆ ಬಗ್ಗೆ ಪೋಷಕರಿಗೆ ತಿಳಿಸಿದ್ದಕ್ಕೆ ಬಾಲಕಿಗೆ ಚಾಕುವಿನಿಂದ ಇರಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಜಿಂದಾಲ್ ಕ್ವಾರ್ಟರ್ಸ್‌ನಲ್ಲಿ ನಡೆದಿದೆ.
ಉತ್ತರಾಖಂಡ್ ಮೂಲದ 11 ವರ್ಷದ ಖುಷಿ ಕೊಲೆಯಾದ ಬಾಲಕಿ.

ಹರಿಯಾಣ ಮೂಲದ ನಂದಕಿಶೋರ್ (50) ಕೊಲೆ ಮಾಡಿರುವ ಆರೋಪಿ.
ಬಾಲಕಿ ತಂದೆ ಹಾಗೂ ಆರೋಪಿ ನಂದಕಿಶೋರ್ ಜಿಂದಾಲ್ ಕಂಪನಿ ನೌಕರಿ ಮಾಡುತ್ತಿದ್ದಾರೆ.
ನಂದಕಿಶೋರ್ ಬಾಲಕಿ ಖುಷಿ ಜೊತೆ ಅಸಭ್ಯವಾಗಿ ವರ್ತಿಸಿದ್ದನು. ಈ ಬಗ್ಗೆ ಬಾಲಕಿ ತಮ್ಮ ಪೋಷಕರಿಗೆ ತಿಳಿಸಿದ್ದಳು. ಬಾಲಕಿ ಆರೋಪ ಹಿನ್ನೆಲೆ ಜಿಂದಾಲ್ ಕಂಪನಿ ನಂದಕಿಶೋರ್ಗೆ ಕ್ವಾರ್ಟರ್ಸ್ ಖಾಲಿ ಮಾಡುವಂತೆ ನೋಟಿಸ್ ನೀಡಿತ್ತು.

ಈ ವಿಚಾರವಾಗಿ ಬಾಲಕಿಯನ್ನು ಕೊಂದು, ಬಳಿಕ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆರೋಪಿ ಚಿಕಿತ್ಸೆ ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -