Tuesday, April 30, 2024
spot_imgspot_img
spot_imgspot_img

ಕಡಬ: ಪಟಾಕಿ ಎಸೆದು ಮರದಲ್ಲಿರುವ ಹಕ್ಕಿಗಳನ್ನು ಓಡಿಸುತ್ತಿರುವ ಕಿಡಿಗೇಡಿಗಳು!

- Advertisement -G L Acharya panikkar
- Advertisement -

ಕಡಬ:- ಕಡಬದ ಮುಖ್ಯರಸ್ತೆಯ ಸಮೀಪದಲ್ಲಿರುವ ಮರದಲ್ಲಿ ಗೂಡುಕಟ್ಟಿ ಮೊಟ್ಟೆಯಿಟ್ಟು ಮರಿಗಳೊಂದಿಗೆ ವಾಸವಾಗಿರುವ ಬೆಳ್ಳಕ್ಕಿ ಗುಂಪುಗಳನ್ನು ಹಾಡಹಗಲೇ ಪಟಾಕಿ ಎಸೆಯುವ ಮೂಲಕ ಓಡಿಸಲು ಕೆಲವು ಕಿಡಿಗೇಡಿಗಳು ಯತ್ನಿಸಿದ ಘಟನೆ ಕಡಬದಲ್ಲಿ ನಡೆದಿದೆ.

ಕಡಬದ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಮರದಲ್ಲಿ ಮಳೆಗಾಲ ಸಮೀಪಿಸುವ ಸಮಯದಲ್ಲಿ ವಲಸೆ ಬರುವ ಬೆಳ್ಳಕ್ಕಿಗಳ ಗುಂಪು ಗೂಡುಕಟ್ಟಿ ವಾಸವಾಗುತ್ತದೆ. ಇವುಗಳಲ್ಲಿ ಇದೀಗ ಸಾಮಾನ್ಯ ಎಲ್ಲಾ ಗೂಡುಗಳಲ್ಲಿ ಪುಟ್ಟ ಹಕ್ಕಿಮರಿಗಳು ಇವೆ.ಇದೇ ಮರದ ಕೆಳಗಡೆ ಕೆಲವು ಗೂಡಂಗಡಿಗಳು ತಲೆಯೆತ್ತಿವೆ.ಇಂದು ಸಾಯಂಕಾಲ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಈ ಹಕ್ಕಿಗಳು ಗೂಡುಕಟ್ಟಿ ವಾಸವಾಗಿರುವ ಮರಕ್ಕೆ ಪಟಾಕಿ ಬೆಂಕಿ ಹಚ್ಚಿ ಎಸೆದಿದ್ದಾರೆ.

ಏಕಾಏಕಿ ಉಂಟಾದ ದೊಡ್ಡ ಪ್ರಮಾಣದ ಶಬ್ದದಿಂದಾಗಿ ಪೇಟೆಗೆ ಬಂದ ಜನರು ಗಾಬರಿಯಾದರೆ, ಬಡಪಾಯಿ ಹಕ್ಕಿಗಳು ಚೆಲ್ಲಾಪಿಲ್ಲಿಯಾಗಿ ಹಾರಾಡುವ ದೃಶ್ಯ ಕಂಡುಬಂದಿದೆ. ಯಾವುದೇ ತೊಂದರೆ ನೀಡದೇ ತಮ್ಮ ಪಾಡಿಗೆ ತಾವು ಮರಿಗಳೊಂದಿಗೆ ಗೂಡುಕಟ್ಟಿ ಸ್ವಚ್ಛಂದವಾಗಿ ಇದ್ದ ಹಕ್ಕಿಗಳು ಭಯಗೊಂಡು ಹಾರಾಡುವ ದೃಶ್ಯ ಬೇಸರವನ್ನು ಉಂಟುಮಾಡುತ್ತಿತ್ತು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಕೃತ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಪಕ್ಷಿಪ್ರಿಯರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!