Tuesday, July 8, 2025
spot_imgspot_img
spot_imgspot_img

ಬೆಳ್ತಂಗಡಿ: ಸರಕಾರಿ ಶಾಲೆಯಲ್ಲಿ ಹಳೆ ಸಾಮಗ್ರಿ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ..!

- Advertisement -
- Advertisement -

ಬೆಳ್ತಂಗಡಿ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಹಳೆ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಸರಕಾರಿ ಉನ್ನತ್ತಿಕರಿಸಿದ ಪ್ರಾಥಮಿಕ ಶಾಲೆಯ ಹಳೆ ಸಾಮಾಗ್ರಿಗಳನ್ನು ಇಡುವ ಕೋಣೆಯಿಂದ ದಿನಾಂಕ 19-8-2022 ರಂದು ಕೋಣೆಯ ಬೀಗ ತೆಗೆದು ಒಳಗಿದ್ದ ಸುಮಾರು ಐದು ಸಾವಿರ ಮೌಲ್ಯದ 100 ಹಳೆಯ ಸ್ಟೀಲ್ ತಟ್ಟೆಗಳು, ಎರಡು ಗುಂಡು ಎಸೆತದ ಕಲ್ಲುಗಳು, 40 ಲೇಝಮ್ ಗಳು ಹಾಗೂ ಹಳೆ ಪಾತ್ರೆಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಅನಿಲ್ ಕುಮಾರ್.ಡಿ ಅವರ ನೇತೃತ್ವದ ತಂಡ ಇಂದು ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಚಾರ್ಮಾಡಿ ಗ್ರಾಮದ ಸಂಕಯ್ಯ ಅವರ ಮಗ ರವೀಂದ್ರ (21) ಮತ್ತು ಚಾರ್ಮಾಡಿ ಗ್ರಾಮದ ಎಂ.ಎ.ಮಹಮ್ಮದ್ ಅವರ ಮಗ ಅಹಮ್ಮದ್ ಶಕೀಲ್(23) ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Related news

error: Content is protected !!