Saturday, August 8, 2026
spot_imgspot_img
spot_imgspot_img

ಬಿಜೆಪಿ ನಾಯಕನನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

- Advertisement -
- Advertisement -
astr

ಹಾಡಹಗಲೇ ಅಪರಿಚಿತ ದುಷ್ಕರ್ಮಿಗಳು ಬಿಜೆಪಿ ನಾಯಕನನ್ನು ಹತ್ಯೆಗೈದ ಘಟನೆ ನಡೆದಿದೆ. ಸೊಹ್ನಾ ಮಾರುಕಟ್ಟೆಯ ಮಾಜಿ ಉಪಾಧ್ಯಕ್ಷ ಮತ್ತು ಬಿಜೆಪಿ ನಾಯಕ ಸುಖ್ಬೀರ್ ಅಲಿಯಾಸ್ ಸುಖಿ ಅವರನ್ನು ಹಾಡಹಗಲೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಹರ್ಯಾಣದ ಗುರುಗ್ರಾಮದ ಸದರ್ ಬಜಾರ್ ಪ್ರದೇಶದಲ್ಲಿ ರಿಥೌಜ್ ನಿವಾಸಿ ಸುಖ್ಬೀರ್ ಮೇಲೆ ಗುಂಡಿನ ದಾಳಿ ನಡೆದಿದೆ.

ಕೊಲೆಯ ನಂತರ, ಇಡೀ ಪ್ರದೇಶದಲ್ಲಿ ಭೀತಿ ಹರಡಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಹ ಹೊರಬಂದಿವೆ. ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

- Advertisement -

Related news

error: Content is protected !!