Thursday, June 25, 2026
spot_imgspot_img
spot_imgspot_img

ಟಿ-20:ಆಸಿಸ್ ವಿರುದ್ಧ ಇಂಗ್ಲೆಂಡ್ ಗೆ ಎರಡು ರನ್ ರೋಚಕ ಜಯ

- Advertisement -
- Advertisement -

ಸೌಥ್ಯಾಂಪ್ಟನ್: ಕೊನೆಯ ಓವರ್ ಗಳಲ್ಲಿ ಬಿಗುವಿನ ದಾಳಿ ನಡೆಸಿದ ಮೂಲಕ ಆಸಿಸ್ ದಾಂಡಿಗರನ್ನು ಕಟ್ಟಿಹಾಕಿದ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಟಿ20 ಟೂರ್ನಿಯಲ್ಲಿ ರೋಚಕ ಜಯ ಸಾಧಿಸಿದೆ.ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ದಾಖಲಿಸಿದೆ. 

ಡೇವಿಡ್ ಮಲನ್ (66 ರನ್) ಮತ್ತು ಜಾಸ್ ಬಟ್ಲರ್ (44 ರನ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇಯಾನ್ ಮಾರ್ಗನ್ ಬಳಗ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 162 ರನ್ ಕಲೆ ಹಾಕಿತು.ಇಂಗ್ಲೆಂಡ್ ನೀಡಿದ 163 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಸಿಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಗುರಿಯನ್ನು ಹಿಂಬಾಲಿಸಿದ  ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ನಾಯಕ ಏರಾನ್ ಫಿಂಚ್ ಜೋಡಿ ತಂಡಕ್ಕೆ 98 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು.  ಸ್ಟೀವನ್ ಸ್ಮಿತ್ 18, ಗ್ಲೇನ್ ಮ್ಯಾಕ್ಸ್ ವೆಲ್ 1 ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಾರ್ಕುಸ್ ಸ್ಟೋಯ್ನಿಸ್ 23 ರನ್ ಬಾರಿಸಿದರು. ಅಂತಿಮವಾಗಿ ಆಸೀಸ್ 20 ಓವರ್ ಗಳಲ್ಲಿ ಆರು ವಿಕೆಟ್ ಗೆ 160 ರನ್ ಸೇರಿಸಿ ಸೋಲು ಕಂಡಿತು. 

- Advertisement -

Related news

error: Content is protected !!