Monday, August 3, 2026
spot_imgspot_img
spot_imgspot_img

ವಿಟ್ಲ: ಮುಸ್ಲಿಂ ವ್ಯಕ್ತಿಯಿಂದ ಹಿಂದೂ ಯುವತಿಯ ಮಾನಭಂಗ ಯತ್ನ ಪ್ರಕರಣ; ಸಂತ್ರಸ್ತೆ ಮನೆಗೆ ಹಿಂದೂ ಜಾಗರಣಾ ವೇದಿಕೆ ಮುಖಂಡರ ಭೇಟಿ

- Advertisement -
- Advertisement -

ವಿಟ್ಲ: ಪುಣಚ ಗ್ರಾಮದ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಮುಸ್ಲಿಂ ವ್ಯಕ್ತಿಯೋರ್ವ ಮಾನಭಂಗ ಯತ್ನ ನಡೆಸಿದ ಘಟನೆ ನಡೆದಿದ್ದು, ಆರೋಪಿ ಉಸ್ಮಾನ್‌ನನ್ನು ಪೊಲೀಸರು ಬಂಧಿಸಿದ ಘಟನೆ ನಿನ್ನೆ ನಡೆದಿದ್ದು, ಸಂತ್ರಸ್ತೆಯ ಮನೆಗೆ ವಿಟ್ಲ ತಾಲೂಕು ಹಿಂದೂ ಜಾಗರಣಾ ವೇದಿಕೆಯ ಮುಖಂಡರು ಭೇಟಿ ನೀಡಿದ್ದಾರೆ.

ಮನೆಯವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸಂತ್ರಸ್ತೆ ಮತ್ತು ಮನೆಯವರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಉಪಾಧ್ಯಕ್ಷರು ರಾಜೇಶ್‌ ಕರೋಪಾಡಿ, ಹರ್ಷ ರೈ ವಿಟ್ಲ ಹಿಂದೂ ಯುವವಾಹಿನಿ ಸಹ ಸಂಯೋಜಕರು ಬಾಲಚಂದ್ರ ಕಟ್ಟೆ ಎಸ್‌ಡಿಎಂಸಿ ಅಧ್ಯಕ್ಷರು ಕೇಪು ಪ್ರೌಢಶಾಲೆ, ದಮಯಂತಿ ಕೇಪು ಪಂಚಾಯತ್‌ ಸದಸ್ಯರು, ಚೇತನ್‌ ಕಡಂಬು ಉಪಸ್ಥಿತರಿದ್ದರು.

ಹಿಂದೂ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಕಾಮುಕ ಉಸ್ಮಾನ್ ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರು

- Advertisement -

Related news

error: Content is protected !!