Tuesday, April 30, 2024
spot_imgspot_img
spot_imgspot_img

ವಿಟ್ಲ: (ನ.20) ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಡಿ ‘ಪ್ರಾಂತೀಯ ಸಮ್ಮಿಲನ 2022-23’ ಪ್ರಾಂತ್ಯ -VII ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317ಡಿ ಇದರ 2022-23ನೇ ಸಾಲಿನ ಪ್ರಾಂತೀಯ ಸಮ್ಮಿಲನ ಪ್ರಾಂತ್ಯ-VII ಕಾರ್ಯಕ್ರಮ ವಿ.ಎನ್. ಸುದರ್ಶನ್ ಪಡಿಯಾರ್ ಎಂ.ಜೆ.ಎಫ್ ಪ್ರಾಂತೀಯ ಅಧ್ಯಕ್ಷರು ಪ್ರಾಂತ್ಯ VII , ಸಾಯಿಗೀತಾ ಪಡಿಯಾರ್ ಪ್ರಾಂತೀಯ ಪ್ರಥಮ ಮಹಿಳೆ ಪ್ರಾಂತ್ಯ VII ಇವರ ಅಧ್ಯಕ್ಷತೆಯಲ್ಲಿ 20-11-2022 ನೇ ಆದಿತ್ಯವಾರ ಸಂಜೆ 4 ಗಂಟೆಗೆ ಜಿ.ಎಲ್ ಅಡಿಟೋರಿಯಂ ಸಾಲೆತ್ತೂರು ರಸ್ತೆ ವಿಟ್ಲದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ನಮ್ಮ ಕುಡ್ಲ ಟಿವಿ ವಾರ್ತಾವಾಚಕಿ ಡಾ. ಪ್ರಿಯಾ ಹರೀಶ್‌ ಮಾಡಲಿದ್ದು, ಅನರ್ಘ್ಯ ರತ್ನಗಳಾದ ಎಸ್‌.ಎಲ್‌.ವಿ ಬುಕ್ಸ್‌ ಇಂಡಿಯ ಪ್ರೈ.ಲಿ ಎಂಡಿ, ದಿವಾಕರ ದಾಸ್‌ ನೆರ್ಲಾಜೆ, ಕರ್ಣಾಟಕ ಬ್ಯಾಂಕ್‌.ಲಿ ಎಂಡಿ & ಸಿಇಒ ಮಹಾಬಲೇಶ್ವರ ಎಂ.ಎಸ್‌, ಕ್ಯಾಂಪ್ಕೋ.ಲಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೂಡ್ಗಿ, ದ.ಕ.ಸ ಹಾಲು ಉತ್ಪಾದಕರ ಒಕ್ಕೂಟ.ನಿ ಅಧ್ಯಕ್ಷ ಕೆ.ಪಿ ಸುಚರಿತಾ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೊಫೊನ್‌ ವಾದಕ ಡಾ.ಪಿ.ಕೆ ಗಣೇಶ್‌, ಶ್ರೀ ಚಂದ್ರನಾಥ ಸ್ವಾಮಿ ಬಸದಿ,ವಿಟ್ಲ ಕಾರ್ಯಾಧ್ಯಕ್ಷ ಜಿತೇಶ್‌ ಎಂ, ಬಜಾರ್‌ ಗ್ರೂಪ್‌ ಮಾರ್ನಬೈಲು ಸುಧಾಕರ ಆಚಾರ್ಯ ಪಿಎಂಜೆಎಫ್‌-ಡಿ7, ಸೇವಾ ಲೈಫ್‌ ಚಾರಿಟೇಬಲ್‌ ಟ್ರಸ್ಟ್‌ ಮಂಗಳೂರು ಅಧ್ಯಕ್ಷ ಅರ್ಜುನ್‌ ಭಂಡಾರ್ಕರ್‌ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್‌ ವಿಟ್ಲಕ್ಕೆ ಭೇಟಿ ನೀಡಲಿದ್ದಾರೆ. ಅತಿಥಿಗಳಾಗಿ ಲಯನ್ಸ್‌ ಜಿಲ್ಲೆ 317ಡಿ ಮಾಜಿ ರಾಜ್ಯಪಾಲರು, ಅರುಣ್‌ ಶೆಟ್ಟಿ ಎಂಜೆಎಫ್‌, ಲಯನ್ಸ್‌ ಜಿಲ್ಲೆ 317ಡಿ ಮಾಜಿ ರಾಜ್ಯಪಾಲರು ಎಂ.ಬಿ ಸದಾಶಿವ್‌ ಎಂಜೆಎಫ್‌, ರಾಜ್ಯಪಾಲರು ಸಂಜೀತ್‌ ಶೆಟ್ಟಿ ಭಾಗವಹಿಸಲಿದ್ದಾರೆ. ವಿಟ್ಲದಲ್ಲಿ ಪ್ರಥಮ ಬಾರಿಗೆ ಲಯನ್ಸ್‌ನ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಲಿದ್ದು, ಸುಮಾರು 700 ಜನರು ಸೇರುವ ನಿರೀಕ್ಷೆಯಿದೆ.

- Advertisement -

Related news

error: Content is protected !!