Tuesday, June 23, 2026
spot_imgspot_img
spot_imgspot_img

ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆ ; ವಿಠ್ಠಲ ಪದವಿಪೂರ್ವ ಕಾಲೇಜ್‌ ಮತ್ತು ಶ್ರೀ ಸತ್ಯಸಾಯಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

- Advertisement -
- Advertisement -

ವಿಟ್ಲ: ಡಿಸೆಂಬರ್ 5ಮತ್ತು 6ರಂದು ಎಸ್ ಬಿ ಜಿ ಪದವಿಪೂರ್ವ ಕಾಲೇಜು ಮಾಯಸಂದ್ರ, ತುಮಕೂರು ಇವರ ಆತಿಥ್ಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ದ.ಕ. ಜಿಲ್ಲಾಮಟ್ಟದಲ್ಲಿ ಆಯ್ಕೆಗೊಂಡಿರುವ ವಿಠಲ ಪದವಿ ಪೂರ್ವ ಕಾಲೇಜಿನ ಚೇತನ್, ಕಾರ್ತಿಕ್ ಪ್ರಸಾದ್, ಭವಿಶ್.ಪಿ. ಆರ್, ಹೃತೇಶ್.ಎಮ್, ಕೀರ್ತೇಶ್, ಕಿಶನ್, ಧನುಷ್ ಕುಮಾರ್, ಸುಜಿತ್, ವರುಣ್, ಶ್ರವಣ್ ರೈ, ಹುಡುಗಿಯರ ವಿಭಾಗದಲ್ಲಿ ಶಿಲ್ಪಾ, ನಿಕ್ಷಿತಾ, ಶ್ರೀ ಸತ್ಯಸಾಯಿ ಪದವಿಪೂರ್ವ ಕಾಲೇಜಿನ ಹೇಮಂತ್ ಬಿ ಎಸ್, ಜೈನ್ ಪದವಿಪೂರ್ವ ಕಾಲೇಜಿನ ತನುಷ್, ಧೀರಜ್ ವಿವೇಕಾನಂದ ಪದವಿಪೂರ್ವ ಕಾಲೇಜಿನ ತನಯ್ ಗೌಡ .ಎಮ್.ಪಿ, ಚಿನ್ಮಯ್. ಎಚ್ ಎಮ್, ಸೈಂಟ್‌ ಅಲೋಷಿಯಸ್ ಕಾಲೇಜಿನ ರಿಕ್ಸನ್ ನೋರೋನ್ಹ ಭಾಗವಹಿಸಲಿದ್ದಾರೆ.

ತಂಡದ ನಿರ್ದೇಶಕರಾಗಿ ವಿಠಲ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರು ಪ್ರಶಾಂತ್ ಕೆ .ಎಸ್, ತರಬೇತುದಾರರಾಗಿ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಶ್ರೀನಿವಾಸ ಗೌಡ (ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಆಟಗಾರ) ಆಯ್ಕೆಗೊಂಡಿದ್ದು ತಂಡಕ್ಕೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!