Wednesday, May 1, 2024
spot_imgspot_img
spot_imgspot_img

ಸುಳ್ಯ: ನಡುರಸ್ತೆಯಲ್ಲೇ ಕಾರನ್ನು ಅಡ್ಡಗಟ್ಟಿ ಹೆಂಡತಿಯನ್ನು ತರಾಟೆಗೆ ತೆಗೆದುಕೊಂಡ ಪ್ರಕರಣ ..! BJP ಶಕ್ತಿ ಕೇಂದ್ರದ ಅಧ್ಯಕ್ಷನ ಮೇಲೆ ದೂರು ದಾಖಲು – ಅನೈತಿಕ ಸಂಬಂಧದ ಆರೋಪ..?!

- Advertisement -G L Acharya panikkar
- Advertisement -

ಸುಳ್ಯ: ನಡುರಸ್ತೆಯಲ್ಲೇ ಪತಿ ಪತ್ನಿಯ ಹೈಡ್ರಾಮ ನಡೆದ ಘಟನೆ ನಡೆದಿದ್ದು ಈ ಬಗ್ಗೆ ವೀಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜಾಲ್ಸೂರಿನಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಪತ್ನಿಯನ್ನು ಬೈಕಲ್ಲಿ ಬಂದ ಪತಿರಾಯ ತರಾಟೆಗೆ ತೆಗೆದುಕೊಂಡಿದ್ದ ಘಟನೆ ನಡೆದಿತ್ತು. ಈ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಸುಧೀರ್ ಎಂಬವರು ಈ ಬಗ್ಗೆ ಪುತ್ತೂರು DYSP ಗೆ ದೂರು ನೀಡಿದ್ದಾರೆ. ಪುಣಚ BJP ಶಕ್ತಿ ಕೇಂದ್ರದ ಅಧ್ಯಕ್ಷ, ಕೇಪು ಗ್ರಾಮದ ಮುಳಿಯಾಲ ಮುಗೇರು ನಿವಾಸಿ ಹರಿಪ್ರಸಾದ್ ಯಾದವ್ ಹಾಗೂ ತನ್ನ ಪತ್ನಿಯ ವಿರುದ್ಧ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?
ಸುಧೀರ್‍ ದಂಪತಿಗಳಿಗೆ 8 ವರ್ಷದ ಹೆಣ್ಣು ಮಗು ಇದೆ. ಅಧೀಕೃತವಾಗಿ ವಿಚ್ಛೇದನ ಆಗಿರಲಿಲ್ಲ. ಈ ನಡುವೆ ಒಡಿಯೂರು ಜಾತ್ರೆಗೆಂದು ಕಾವ್ಯಶ್ರೀ ಹೋಗಿದ್ದು ಈ ವೇಳೆ ಅನೈತಿಕ ಸಂಬಂಧವನ್ನು ನಡೆಸುವ ದುರುದ್ದೇಶದಿಂದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್ ತನ್ನ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವಿಷಯ ತಿಳಿದ ಸುಧೀರ್‍ ಬೈಕಿನಲ್ಲಿ ಪುತ್ತೂರಿನಿಂದ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ.

ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ಇಬ್ಬರು ಹೋಗುತ್ತಿದ್ದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರನ್ನು ಸುಧೀರ್ ಮೇಲೆಯೇ ಹಾಯಿಸಿ ಕೊಲ್ಲುವ ಪ್ರಯತ್ನ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಆ ಸಂದರ್ಭದಲ್ಲಿ ಸ್ಥಳೀಯರನ್ನು ಕಂಡ ಆರೋಪಿ ಹರಿಪ್ರಸಾದ್ ಯಾದವ್ ಸ್ಥಳದಿಂದ ಓಡಿಹೋಗಿದ್ದು, ಕಾರಿನಲ್ಲಿದ್ದ ನನ್ನ ಪತ್ನಿ ನನ್ನನ್ನು ತಡೆದರೆ ಮುಂದೆ ನಿನ್ನನ್ನು ಕೂಡ ಕೊಲ್ಲಿಸದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಒಡ್ಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವೈಯುಕ್ತಿಕ ದ್ವೇಷದಿಂದ ಈ ರೀತಿ ಮಾಡ್ತಿದ್ದಾನೆ – ಹರಿಪ್ರಸಾದ್ ಯಾದವ್
‌ಈ ಬಗ್ಗೆ ಹೇಳಿಕೆ ನೀಡಿರುವ ಹರಿಪ್ರಸಾದ್ ಯಾದವ್ “ನಾನು ಕಾರಿನಲ್ಲಿ ಇರಲಿಲ್ಲ. ಪುತ್ತೂರಿನಲ್ಲಿ ನಡೆಯುತ್ತಿದ್ದ ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಿರತನಾಗಿದ್ದೆ. ಮಹಿಳೆಗೆ ಸುಳ್ಯಕ್ಕೆ ಡ್ರಾಪ್ ಕೊಡಲು ಚಾಲಕನನ್ನು ಕಳುಹಿಸಿದ್ದೆ. ನನ್ನ ಏಳಿಗೆ ಸಹಿಸದ ಸುಧೀರ್ ವೈಯುಕ್ತಿಕ ದ್ವೇಷದಿಂದ ಈ ರೀತಿ ಮಾಡ್ತಿದ್ದಾನೆ” ಎಂದಿದ್ದಾರೆ.

ಇನ್ನು ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಕರೆ ಮಾಡಿದ ಪೆರುವಾಯಿಯ ಬಿಜೆಪಿ ಮುಖಂಡನೊಬ್ಬ ಈ ವಿಷಯವನ್ನು ಇಲ್ಲಿಯೇ ಬಿಡಬೇಕು. ಮುಂದಕ್ಕೆ ಕೊಂಡೋಗಬಾರದು ಎಂದು ಬಿಜೆಪಿ ನಾಯಕ ಹರಿಪ್ರಸಾದ್ ಯಾದವ್ ಪರ ಬ್ಯಾಟಿಂಗ್ ನಡೆಸಿದ್ದಾನೆ.

ಬಿಜೆಪಿ ಪಕ್ಷದ ಬಗ್ಗೆ ಗೌರವವಿದೆ, ಹರಿಪ್ರಸಾದ್ ಯಾದವ್‌ನನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದು ಸರಿಯಲ್ಲ – ಸುಧೀರ್
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಧೀರ್, ಹರಿಪ್ರಸಾದ್ ಯಾದವ್ ನನಗೆ ದೂರದ ಸಂಬಂಧಿಯಾಗಬೇಕು. ಸಂಬಂಧದಲ್ಲಿ ಅಣ್ಣ ಬೀಳಬೇಕು. ಅವನು ಈ ರೀತಿಯಾಗಿ ಮಾಡುತ್ತಾನೆ ಎಂಬುವುದು ನಾನು ಕನಸಿನಲ್ಲೂ ಅಂದುಕೊಂಡರಲಿಲ್ಲ. ಹರಿಪ್ರಸಾದ್ ಯಾದವ್ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ, ಪುಣಚ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷನಾಗಿದ್ದು, ನನಗೆ ಪಕ್ಷದ ಬಗ್ಗೆ ಅಪಾರ ಗೌರವ ಇತ್ತು. ಆದರೆ ಪಕ್ಷದ ಜವಾಬ್ದಾರಿಯಿದ್ದು ನನ್ನ ಸಂಸಾರದಲ್ಲಿ ಆಟ ಆಡಿದ್ದಾನೆ. ಇಂತವನನ್ನು ಹೆಣ್ಣು ಮಕ್ಕಳಿದ್ದ ಮನೆಗೆ ಬರಲು ಹೇಳುವಾಗ ಜಾಗೃತೆ ವಹಿಸಿ. ನಾನು ಪುತ್ತೂರು ಶಾಸಕರಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷರಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ ಬೇರೆಯವರ ಸಂಸಾರದಲ್ಲಿ ಆಟ ಆಡಿದ ಹರಿಪ್ರಸಾದ್‌ ಯಾದವ್ ಅವರು ಬಿಜೆಪಿ ಪಕ್ಷಕ್ಕೇ ಕಳಂಕ. ಇನ್ನೊಬ್ಬರ ಬಾಳಿನಲ್ಲಿ ಆಟ ಆಡಿದವ ಮುಂದೆ ಬೇರೆಯವರ ಜೀವನವನ್ನೂ ಹಾಳು ಮಾಡುತ್ತಾನೆ. ಹೀಗಾಗಿ ಅವನನ್ನು ಜವಾಬ್ದಾರಿ ಸ್ಥಾನದಲ್ಲಿ ಉಳಿಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

- Advertisement -

Related news

error: Content is protected !!