Tuesday, April 30, 2024
spot_imgspot_img
spot_imgspot_img

ಮಾಣಿ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಮಾಣಿ, ಅನಂತಾಡಿ, ನೆಟ್ಲಮುಡ್ನೂರು, ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ-ಉದ್ಘಾಟನೆ: ಒಂದು ವರ್ಷ ಅವಧಿಯಲ್ಲಿ ೬.೫ಕೊಟಿ ಅನುದಾನ: ಕೋಟಾ

- Advertisement -G L Acharya panikkar
- Advertisement -

ವಿಟ್ಲ: ಬಂಟ್ವಾಳ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ವರ್ಷ ಅವಧಿಯಲ್ಲಿ ೬.೫ಕೊಟಿ ಅನುದಾನವನ್ನು ಒಂದೆರಡು ಗ್ರಾಮಗಳಿಗೆ ಸಮರ್ಪಿಸಿ, ಅಭಿವೃದ್ಧಿ ಕಾಮಗಾರಿಯನ್ನು ಜನರಿಗೆ ಒದಗಿಸಿರುವುದು ಶ್ಲಾಘನೀಯದ ಕಾರ್ಯ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಮಾಣಿ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಮಾಣಿ, ಅನಂತಾಡಿ, ನೆಟ್ಲಮುಡ್ನೂರು, ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಕಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.

ಬಂಟ್ವಾಳ ವಿಧಾನ ಸಭಾಕ್ಷೇತ್ರದ ಶಾಸಕ ರಾಜೇಶ್   ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಜನರ ಬೇಡಿಕೆಗಳನ್ನು ವಿವಿಧಯೋಜನೆಗಳ ಜತೆಗೆ ಜೋಡಿಸಿಕೊಂಡು ಹಂತ ಹಂತವಾಗಿ ಪೂರೈಸಲಾಗುತ್ತಿದೆ ಎಂದರು.ಮಾಣಿ ಉಳ್ಳಾಲ್ತಿ ದೈವಸ್ಥಾನ ಹಾಗೂ ಕರಿಂಕ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,
ಉಪಾಧ್ಯಕ್ಷೆ ಕಸ್ತೂರಿ ಪಂಜ, ಅನಂತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸನತ್ ಕುಮಾರ್ ರೈ, ಉಪಾಧ್ಯಕ್ಷೆ ಕವಿತಾ, ಬಂಟ್ವಾಳ ವಿಧಾಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಗ್ರಾಮಗಳ ಉಸ್ತುವಾರಿ ಶಿವರಾಮ ಶೆಟ್ಟಿ ಕರಿಂಕ, ಗ್ರಾಮ ಮಾಜಿ ಉಪಾಧ್ಯಕ್ಷ ಜಯರಾಮ ಆಚಾರ್ಯ, ಮಾಣಿ ಗ್ರಾ.ಪಂ.ಅಧ್ಯಕ್ಷೆ ಮಮತಾ ಶೆಟ್ಟಿ, ಉಪಾಧ್ಯಕ್ಷೆ ಸಂಪಾವತಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಉಪಾಧ್ಯಕ್ಷ ರೊನಾಲ್ಡ್ ಡಿಸೋಜಾ, ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ, ಗ್ರಾ.ಪಂ.ಸದಸ್ಯರಾದ ಗಣೇಶ್ ರೈ ಮಾಣಿ, ನಾರಾಯಣ ಶೆಟ್ಟಿ ತೋಟ, ಪ್ರಮುಖರಾದ ಹರೀಶ್ ಮಾಣಿ, ನರಸಿಂಹ ಶೆಟ್ಟಿ, ಭರತ್ ಶೆಟ್ಟಿ, ರಮಾನಾಥ ರಾಯಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಷಣ್ಮುಂಗ, ಇಂಜಿನಿಯರ್ ಅರುಣ್ ಪ್ರಕಾಶ್, ಪ್ರೀತಮ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!