Friday, May 17, 2024
spot_imgspot_img
spot_imgspot_img

ಉಡುಪಿ:ವೀಲ್ ಚೇರ್ ನಲ್ಲಿಯೇ ಅಯೋಧ್ಯೆಗೆ ಹೊರಟ 60 ವರ್ಷದ ವೃದ್ದ

- Advertisement -G L Acharya panikkar
- Advertisement -

ಉಡುಪಿ: ಲೋಕ ಶಾಂತಿ ಮತ್ತು ಭಾವೈಕ್ಯತೆಗಾಗಿ ಸುಮಾರು 60 ವರ್ಷದ ವೃದ್ದರೊಬ್ಬರು ತನ್ನ ವೀಲ್ ಚೆಯರ್ ನಲ್ಲಿಯೇ ಅಯೋಧ್ಯೆಗೆ ಹೊರಟಿದ್ದಾರೆ.

ಕರ್ನಾಟಕದ ಸವದತ್ತಿ ಮೂಲದ ಮಂಜುನಾಥ್. 2021 ಡಿಸೆಂಬರ್ ನಲ್ಲಿ ಉತ್ತರಾಖಂಡದಿಂದ ಆರಂಭಿಸಿದ ಯಾತ್ರೆಯು ಇಂದು ಉಡುಪಿಯನ್ನು ತಲುಪಿದೆ. ವಿಶೇಷ ಅಂದರೆ ಇವರು ತಮ್ಮ ವೀಲ್ ಚಯರ್ ನಲ್ಲಿ ಪ್ರಯಾಣಿಸಿದ್ದಾರೆ. ಇದೀಗ ಮುಂದುವರಿದ ಭಾಗವಾಗಿ ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯೆಗೆ ತಲುಪುವ ಮಹದಾಸೆಯನ್ನು ಅವರು ಹೊಂದಿದ್ದಾರೆ.

ಈಗಾಗಲೇ ತಿರುಪತಿ, ರಾಮೇಶ್ವರ, ಕನ್ಯಾಕುಮಾರಿ, ಕೂಡಲಸಂಗಮ ಚನ್ನಬಸವೇಶ್ವರ, ಮಹಾಲಕ್ಷ್ಮೀ ಕೋಲಾಪುರ, ಪಂಡರೀಪುರ, ಧರ್ಮಸ್ಥಳ ಮತ್ತು ಇನ್ನಿತರ ಹಲವು ದೇವಸ್ಥಾನಗಳನ್ನು ದರ್ಶನ ಮಾಡಿ ಉಡುಪಿಯ ಶ್ರೀ ಕೃಷ್ಣನ ದರ್ಶನಕ್ಕೆ ಗುರುವಾರದಂದು ತಲುಪಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ಪ್ರಯಾಣ ಆರಂಭಿಸುವ ಮಂಜುನಾಥ್ ಕತ್ತಲಾಗುವವರೆಗೂ ಆದಷ್ಟು ದೂರ ಕ್ರಮಿಸುತ್ತಾರೆ. ರಾತ್ರಿ ಹೊತ್ತು ದೇವಸ್ಥಾನ ಅಥವಾ ಇನ್ನಿತರ ಕಡೆಗಳಲ್ಲಿ ನಿಂತು ಮರುದಿನ ಮತ್ತೆ ಪ್ರಯಾಣ ಮುಂದುವರೆಸುತ್ತಾರೆ.

ಮಂಜುನಾಥ್ ರವರು ಈ ಹಿಂದೆ ಎರಡು ಬಾರಿ ಸೈಕಲ್ ನಲ್ಲಿ ಇಂತಹದೇ ಯಾತ್ರೆಯನ್ನು ಕೈಗೊಂಡಿದ್ದರು ಆದರೆ ಆ ಬಳಿಕ ಅವರಿಗೆ ಅಪಘಾತವಾಗಿ ಒಂದು ಕಾಲಿನ ಬಲವನ್ನೇ ಕಳಕೊಂಡಿದ್ದಾರೆ. 100 ಮೀಟರ್ ನಡೆಯಲು ಕೂಡಾ ಆಗದ ಪರಿಸ್ಥಿತಿಯಲ್ಲಿ ಪ್ರಸ್ತುತ ಅವರಿದ್ದಾರೆ ಆದರೂ ಕೂಡಾ ಛಲ ಬಿಡದೇ ಮತ್ತೆ ವೀಲ್ ಚಯರ್ ನಲ್ಲಿ ತಮ್ಮ ಪ್ರಯಾಣ ಆರಂಭಿಸಿದ್ದಾರೆ.

- Advertisement -

Related news

error: Content is protected !!