Sunday, July 19, 2026
spot_imgspot_img
spot_imgspot_img

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 620 ಅಂಕಗಳನ್ನು ಪಡೆದ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಿ ಎ ಎ ಭಾರಧ್ವಜ್

- Advertisement -
- Advertisement -

ಬಂಟ್ವಾಳ ತಾಲೂಕಿಗೆ ಪ್ರಥಮ ರ್‍ಯಾಂಕ್ ,ರಾಜ್ಯಕ್ಕೆ 6 ನೇ ರ್‍ಯಾಂಕ್

ಶೇ. 100 ಫಲಿತಾಂಶ ದಾಖಲಿಸಿದ ಬಾಲವಿಕಾಸ, ಶೇ. 61 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

ವಿಟ್ಲ -ಪೆರಾಜೆ : 2025-26 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಾಣಿ – ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ಗುಣಮಟ್ಟದ ಫಲಿತಾಂಶವನ್ನು ದಾಖಲಿಸಿದ್ದಾರೆ.

ಪೂರ್ವಿ ಎ ಭಾರಧ್ವಜ್ -620 ( 99.2%) ಪ್ರಥಮ ಸ್ಥಾನ, ಸಂಜನಾ ಎಸ್ ಭಟ್ -614 ( 98.24%) ದ್ವಿತೀಯ ಸ್ಥಾನ ಹಾಗೂ ಅಂಶಿಕ ಎಸ್ ಕೆ – 613 ( 98.08) ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

- Advertisement -

Related news

error: Content is protected !!