- Advertisement -
- Advertisement -
ಕೆಎಸ್‌ಆರ್‌ಟಿಸಿ ಬಸ್ ವೊಂದು ಬ್ರೇಕ್ ಫೈಲ್ ಆಗಿ ಎರಡು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ರಸ್ತೆಗೆ ಬಿದ್ದು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ರಾಯಚೂರಿನ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ.
ರಾಯಚೂರಿನಿಂದ ತಲಾಮರಿ ಎಂಬ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಇದಾಗಿದ್ದು, ನಗರದ ಮೈನ್ ಬಸ್ ಸ್ಟಾಂಡ್ ನಿಂದ ಹೊರ ಬರುತ್ತಿದ್ದಂತೆ ಬಸ್ಸಿನ ಬ್ರೇಕ್ ಫೈಲ್ ಆಗಿದೆ ಎಂದು ಹೇಳಲಾಗಿದೆ. ಬ್ರೇಕ್ ಫೇಲ್ ಅದ ಪರಿಣಾಮ ಚಾಲಕನ ನಿಯಂತ್ರಣಕ್ಕೆ ಸಿಗದೇ ಮುಂದೆ ಹೋಗುತ್ತಿದ್ದ ಬಸ್ ಎರಡು ಬೈಕಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ ಬರುತ್ತಿರುವುದನ್ನು ಗಮನಿಸಿ ಇಬ್ಬರು ಚಾಲಕರು ಬೈಕ್ ಬಿಟ್ಟು ಹಾರಿದ್ದಾರೆ. ಪರಿಣಾಮ ಅವರಿಬ್ಬರೂ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಸದ್ಯ ರಾಯಚೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ಬಸ್ಸುಗಳನ್ನು ರಸ್ತೆಗೆ ಇಳಿಸಿದ್ದಕ್ಕೆ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
- Advertisement -