Friday, May 3, 2024
spot_imgspot_img
spot_imgspot_img

ಬಂಟ್ವಾಳ: ರೈಲ್ವೇ ಮೇಲ್ಸೇತುವೆಯ ಅಡಿಭಾಗದಲ್ಲಿ ಸಿಲುಕಿದ ಕಂಟೈನರ್ ಲಾರಿ

- Advertisement -G L Acharya panikkar
- Advertisement -

ಬಂಟ್ವಾಳ: ರೈಲ್ವೇ ಮೇಲ್ಸೇತುವೆಯ ತಳ ಭಾಗದಲ್ಲಿ ಅಳವಡಿಸಿದ್ದ ಕಬ್ಬಿಣದ ಕಮಾನಿನಲ್ಲಿ ಕಂಟೈನರ್ ಲಾರಿಯೊಂದು ಸಿಲುಕಿ ಹಾಕಿಕೊಂಡ ಘಟನೆ ಬಿ.ಸಿ.ರೋಡು- ಪೊಳಲಿ ರಸ್ತೆಯ ಮೊಡಂಕಾಪು ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಘನ ಗಾತ್ರಗಳು ಸಾಗಿದರೆ ರೈಲ್ವೇ ಸೇತುವೆಗೆ ಹಾನಿಯಾಗುತ್ತದೆ ಎಂದು ತಳ ಭಾಗದಲ್ಲಿ ಕಬ್ಬಿಣದ ಕಮಾನು ಅಳವಡಿಸಲಾಗಿದೆ. ಆದರೆ ಲಾರಿ ಚಾಲಕ ಈ ಕುರಿತು ತಿಳಿಯದೆ ಚಲಾಯಿಸಿದ್ದು, ಆದರೆ ಲಾರಿಯ ಮೇಲ್ಬಾಗ ಕಮಾನಿನಲ್ಲಿ ಸಿಲುಕಿ ಹಾಕಿಕೊಂಡಿದೆ. ಈ ಭಾಗದಲ್ಲಿ ಎರಡು ರಸ್ತೆಗಳಿದ್ದ ಹಿನ್ನೆಲೆ ಸಂಚಾರಕ್ಕೆ ಹೆಚ್ಚಿನ ತೊಂದರೆ ಉಂಟಾಗಿಲ್ಲ.

ಲಾರಿಯು ಕೆಮಿಕಲ್ ಬ್ಯಾರಲ್‌ಗಳನ್ನು ತುಂಬಿಕೊಂಡು ಬೆಂಗಳೂರು ಭಾಗದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದು, ಲಾರಿ ಚಾಲಕ ಗೂಗಲ್ ಮ್ಯಾಪ್ ಹಾಕಿ ಒಳರಸ್ತೆಯಲ್ಲಿ ಸಂಚರಿಸಿ ಗೊಂದಲಕ್ಕೆ ಒಳಗಾಗಿದ್ದನು. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಆಗಮಿಸಿ ಲಾರಿಯನ್ನು ಕ್ರೇನ್ ಮೂಲಕ ತೆರವು ಮಾಡುವ ವ್ಯವಸ್ಥೆ ಮಾಡಿದರು.

- Advertisement -

Related news

error: Content is protected !!