Wednesday, July 29, 2026
spot_imgspot_img
spot_imgspot_img

ಐತಿಹಾಸಿಕ ಪ್ರತಿಜ್ಞೆಗೈದ ಬಿಜೆಪಿ ಕಾರ್ಪೋರೇಟರ್ಸ್

- Advertisement -
- Advertisement -

ಹೈದರಾಬಾದ್​​: ಇತ್ತೀಚೆಗೆ ಗ್ರೇಟರ್ ಹೈದರಾಬಾದ್​ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ 48 ವಾರ್ಡ್​​ಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಅದರಂತೆ ಇಂದು ವಿಜಯೋತ್ಸವವನ್ನ ಆಚರಿಸಿದ ಬಿಜೆಪಿ ಕಾರ್ಪೊರೇಟರ್​ಗಳು, ಅಲ್ಲಿನ ಭಾಗ್ಯಲಕ್ಷ್ಮೀ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ಐತಿಹಾಸಿಕ

ಪ್ರತಿಜ್ಞೆಯನ್ನ ಮಾಡಿದರು.

ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್, 48 ಕಾರ್ಪೊರೇಟರ್​ಗಳಿಗೆ ಪ್ರಮಾಣವಚನ ಭೋದಿಸಿದರು. ಭ್ರಷ್ಟಾಚಾರದಿಂದ ದೂರವಿದ್ದು ಜನರಿಗೆ ಉತ್ತಮ ಸೇವೆ ಸಲ್ಲಿಸುವುದು ಹಾಗೂ ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿರುತ್ತೇವೆ ಅಂತಾ ಪ್ರತಿಜ್ಞೆ ಮಾಡಿದ್ದಾರೆ.

ಇದಕ್ಕೂ ಮೊದಲು ಸಂಜಯ್ ಕುಮಾರ್ ಹಾಗೂ ಶಾಸಕ ರಾಜಾ ಸಿಂಗ್ ಅವರನ್ನ ಆತ್ಮೀಯವಾಗಿ ಸ್ವಾಗತ ಮಾಡಿದ್ರು. ನಂತರ ಭಾಗ್ಯಲಕ್ಷ್ಮೀ ದರ್ಶನ ಪಡೆದಿದ್ದಾರೆ. ಡಿಸೆಂಬರ್ 1 ರಂದು ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 150 ವಾರ್ಡ್​ಗಳ ಪೈಕಿಯಲ್ಲಿ 48 ರಲ್ಲಿ ಗೆಲುವು ಸಾಧಿಸಿತ್ತು.

- Advertisement -

Related news

error: Content is protected !!