- Advertisement -
- Advertisement -



ತನ್ನ ನಿದ್ದೆ ಹಾಳು ಮಾಡುತ್ತಿದೆ ಎಂದು ಕೋಪಗೊಂಡ ತಂದೆ ಒಂದು ವರ್ಷದ ಪುಟ್ಟ ಮಗುವನ್ನು ಗೋಡೆಗೆ ಎಸೆದು ಕೊಲೆ ಮಾಡಿರುವ ಕೃತ್ಯ ಧಾರವಾಡದಲ್ಲಿ ನಡೆದಿದೆ.
ಕೊಲೆಯಾದ ಮಗು ಶ್ರೇಯಾ(1) ಎಂದು ತಿಳಿದು ಬಂದಿದೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಶಂಭುಲಿಂಗಯ್ಯ ಶಾಪೂರಮಠ ಕೊಲೆಗೈದ ತಂದೆ ಎಂದು ತಿಳಿದು ಬಂದಿದೆ. ಮಲಗಿದ್ದಾಗ ಅಳುತ್ತಿದ್ದ ಹೆಣ್ಣು ಮಗುವಿನ ಮೇಲೆ ಸಿಟ್ಟಿಗೆದ್ದ ತಂದೆ ಮಗುವನ್ನು ಗೋಡೆಗೆ ಎಸೆದಿದ್ದಾನೆ. ಒಂದು ವರ್ಷದ ಶ್ರೇಯಾಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ತಂದೆ ಮಗುವಿನ ಮೇಲೆ ಕೋಪ ತೋರಿಸಿಕೊಂಡಿದ್ದಾನೆ. ಕುಡಿತದ ನಶೆಯಲ್ಲಿದ್ದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
- Advertisement -