Thursday, July 4, 2024
spot_imgspot_img
spot_imgspot_img

ಕರೋಪಾಡಿ : ವಿದ್ಯುತ್ ತಂತಿಗೆ ತಾಗುವ ನೆಪದಲ್ಲಿ ತೆರವುಗೊಳಿಸಿದ ಮರಗಳ ಅಕ್ರಮ ಸಾಗಾಟ ಮಾಡಿದ ಅರಣ್ಯಾಧಿಕಾರಿ :

- Advertisement -G L Acharya panikkar
- Advertisement -

ಕರೋಪಾಡಿ : ಬಂಟ್ವಾಳ ತಾ.ಕೇರಳ ಗಡಿಭಾಗದ ಕರೋಪಾಡಿ ಗ್ರಾಮದ ಆನೆಕಲ್ಲು ಮದರಮೂಲೆ ರಸ್ತೆ ಬದಿಯಲ್ಲಿದ್ದ ಮರಗಳನ್ನು ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಕಾರಣಕ್ಕಾಗಿ ಸ್ಥಳೀಯರು ಅರಣ್ಯಾಧಿಕಾರಿಯ ನೇತೃತ್ವದಲ್ಲಿ ತೆರವುಗೊಳಿಸಿದ್ದರು. ತೆರವುಗೊಳಿಸಿದ ಮರಗಳನ್ನು ಕನ್ಯಾನ ವಲಯ ಅರಣ್ಯ ಕಛೇರಿಯ ಆವರಣದಲ್ಲಿ ಶೇಖರಿಸಬೇಕಾಗಿತ್ತು.

ಆದರೆ ಇಲ್ಲಿನ ಫಾರೆಸ್ಟರ್ ಬೆಲೆಬಾಳುವ ಅಕೇಶಿಯಾ ಮರಗಳ ದಿಮ್ಮಿಗಳನ್ನು ಪಿಕಪ್ ವಾಹನದಲ್ಲಿ ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡಿರುವ ಬಗ್ಗೆ ಸ್ಥಳೀಯರು ಪುತ್ತೂರು ಎಸಿಎಫ್ ಮತ್ತು ರೇಂಜರ್ ಅವರಿಗೆ ಮಾಹಿತಿ ನೀಡಿದರು. ಆದರೆ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಅರಣ್ಯ ರಕ್ಷಣೆ ಮಾಡಬೇಕಾಗಿದ್ದ ಅರಣ್ಯಾಧಿಕಾರಿಯೇ ಮರಗಳನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡಿರುವುದು ಸಾರ್ವಜನಿಕರಿಂದ ಬಯಲಾಗಿದೆ.


ಅಕ್ರಮ ಮರ ಸಾಗಾಟ ಮಾಡಿದ್ದಲ್ಲದೇ ಇಲಾಖೆಗೇ ವಂಚಿಸಿದ ಅರಣ್ಯಾಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾಗಾಟ ಮಾಡಿದ ಮರಗಳನ್ನು ಮರಳಿ ಪಡೆಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!