Saturday, June 13, 2026
spot_imgspot_img
spot_imgspot_img

ಕುವೈತ್‌ನಲ್ಲಿ ನಡೆದ ಅಗ್ನಿ ಅವಘಡಕ್ಕೆ ಕೇರಳದ ಕುಟುಂಬ ಬಲಿ..!

- Advertisement -
- Advertisement -

ಕುವೈತ್‌ನ ಅಬ್ಬಸ್ಸಿಯಾ ಎಂಬಲ್ಲಿನ ತಮ್ಮ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕೇರಳದ ಪಟ್ಟಣಂತಿಟ್ಟ ಮೂಲದ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಮ್ಯಾಥ್ಯೂ ಮುಝಕ್ಕಲ್‌, ಅವರ ಪತ್ನಿ ಲಿನಿ ಅಬ್ರಹಾಂ ಮತ್ತು ಮಕ್ಕಳಾದ ಐಸಾಕ್‌ ಮತ್ತು ಎರಿನ್‌ ಮೃತ ದುರ್ದೈವಿಗಳಾಗಿದ್ದಾರೆ.

ಮ್ಯಾಥ್ಯೂ ಕುವೈತ್‌ನಲ್ಲಿ 15 ವರ್ಷಗಳಿಂದ ಉದ್ಯೋಗದಲ್ಲಿದ್ದರು. ಪತ್ನಿ ನರ್ಸ್‌ ಆಗಿದ್ದರು, ಮಕ್ಕಳು ಕೂಡ ಕುವೈತ್‌ನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ತಮ್ಮ ಊರಾದ ಕೇರಳದ ನೆಡುಂಬಸ್ಸೆರಿಯಲ್ಲಿ ಕಳೆದು ಗುರುವಾರ ರಾತ್ರಿಯಷ್ಟೇ ಕುಟುಂಬ ಕುವೈತ್‌ಗೆ ಮರಳಿತ್ತು. ಕುವೈತ್ ಮರಳಿದ ಕೆಲವೇ ಗಂಟೆಗಳಲ್ಲಿ ಕುಟುಂಬ ಅಗ್ನಿ ಅನಾಹುತಕ್ಕೆ ಬಲಿಯಾಗಿದೆ. ಕೊಠಡಿಯಲ್ಲಿದ್ದ ಎಸಿಯಲ್ಲಿ ಉಂಟಾದ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!