Friday, June 27, 2025
spot_imgspot_img
spot_imgspot_img

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ: 8 ಮಕ್ಕಳು ಗಂಭೀರ

- Advertisement -
- Advertisement -

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ವಿಶಾಖ ಪಟ್ಟಣಂನಲ್ಲಿ ನಡೆದಿದೆ.

ಲಾರಿಯೊಂದು ಸಾಮಾನ್ಯ ವೇಗದಲ್ಲಿ ಫ್ಲೈ ಓವರ್ ಕೆಳಗೆ ಸಾಗುತ್ತಿತ್ತು. ಈ ವೇಳೆ ಅತ್ಯಂತ ವೇಗವಾಗಿ ಬಂದ ಆಟೋ ಲಾರಿಗೆ ಅಡ್ಡ ಬಂತು. ಲಾರಿ ಚಾಲಕ ಬ್ರೇಕ್ ಹಾಕುವ ಹೊತ್ತಿಗೆ ಆಟೋ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿತ್ತು. ಆಟೋ ಒಳಗೆ ಇದ್ದ ಶಾಲಾ ಮಕ್ಕಳು ರಸ್ತೆಯ ಮೇಲೆ ಹಾರಿ ಬಿದ್ದಿದ್ದರು.ಈ ಘಟನೆ ನಡೆದ ಕೆಲವೇ ಸೆಕೆಂಡ್‌ಗಳಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಕಾರ್ ಹಾಗೂ ಬೈಕ್ ಚಾಲರು ತಮ್ಮ ವಾಹನ ನಿಲ್ಲಿಸಿ ಗಾಯಗೊಂಡ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾದರು. ಲಾರಿ ಕೆಳಗೆ ಸಿಲುಕಿದ್ದ ಆಟೋ ಹೊರ ತೆಗೆದು, ಗಾಯಗೊಂಡ ಮಕ್ಕಳನ್ನು ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಲು ನೆರವಾದರು.

ಗಾಯಗೊಂಡ 8 ಮಕ್ಕಳ ಪೈಕಿ ನಾಲ್ವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಮೂರು ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಓರ್ವ ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರಿಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಘಟನೆ ಸಂಬಂಧ ಆಟೋ ಚಾಲಕ ಹಾಗೂ ಲಾರಿ ಚಾಲಕ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!