- Advertisement -
- Advertisement -
ಶ್ರೀ ಜಂಬುನಾಥ ರಥೋತ್ಸವ ಸಾಗುತ್ತಿರುವಾಗ ತೇರಿನ ಚಕ್ರದಡಿಗೆ ಓರ್ವ ವ್ಯಕ್ತಿ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ರಾಮಪ್ಪ (49) ಎಂದು ಗುರುತಿಸಲಾಗಿದೆ.
ಇವರು ರಥ ಕಟ್ಟುವ ಕೆಲಸ ಮಾಡುವರಾಗಿದ್ದರು. ಹೊಸಪೇಟೆಯಲ್ಲಿ ಶ್ರೀ ಜಂಬುನಾಥ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ಎಲ್ಲ ಜನರು ಸಂಭ್ರಮದಿಂದ ತೇರು ಅನ್ನು ಎಳೆಯುತ್ತಿದ್ದರು. ಈ ವೇಳೆ ಭಕ್ತರು ಎಸೆದ ಬಾಳೆಹಣ್ಣಿನ ಮೇಲೆ ರಾಮಪ್ಪ ಕಾಲಿಟ್ಟಿದ್ದಾರೆ. ತಕ್ಷಣ ಕಾಲು ಜಾರಿದ್ದರಿಂದ ತೇರಿನ ಚಕ್ರದಡಿಗೆ ಬಿದ್ದಿದ್ದಾರೆ. ಪರಿಣಾಮ ತೇರಿನ ಚಕ್ರ ದೇಹದ ಮೇಲೆ ಹೋಗಿದ್ದರಿಂದ ವ್ಯಕ್ತಿ ಮೃತಪಟ್ಟದ್ದಾರೆ. ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
- Advertisement -