Monday, April 29, 2024
spot_imgspot_img
spot_imgspot_img

ಉಡುಪಿ: ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಇಬ್ಬರ ಮೆರವಣಿಗೆ

- Advertisement -G L Acharya panikkar
- Advertisement -

ಉಡುಪಿ: ನಿಗೂಢವಾಗಿ ಕಣ್ಮರೆಯಾಗಿ ಅಚ್ಚರಿಯ ರೀತಿಯಲ್ಲಿ ಮನೆಗೆ ವಾಪಸ್ ಆದ ಯುವಕನನ್ನು ಇಡೀ ಗ್ರಾಮಸ್ಥರು ಮೆರವಣಿಗೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮಚ್ಚೆಟ್ಟು ವ್ಯಾಪ್ತಿಯ ವಿವೇಕಾನಂದ ವಾರದ ಹಿಂದೆ ಕಣ್ಮರೆಯಾಗಿದ್ದರು. ಊರು, ಕಾಡಿನ ಸುತ್ತಮುತ್ತ ಇಡೀ ಗ್ರಾಮಕ್ಕೆ ಗ್ರಾಮ ಆತನನ್ನು ಹುಡುಕಾಟ ಮಾಡಿತ್ತು. ಪೊಲೀಸರು, ಅರಣ್ಯ ಇಲಾಖೆ, ಕುಟುಂಬಸ್ಥರು ಎಷ್ಟೇ ಹುಡುಕಾಡಿದರೂ ಯುವಕನ ಪತ್ತೆ ಆಗಿರಲಿಲ್ಲ.

ಮನೆಯಿಂದ ಹೊರಡುವಾಗ ಸಾಕು ನಾಯಿ ಕೂಡ ವಿವೇಕಾನಂದ ಜೊತೆಗೆ ತೆರಳಿತ್ತು. ವಾರಗಳ ಕಾಲ ಕಾಡಿನಲ್ಲಿ ಅಲೆದಾಡಿದ್ದ ವಿವೇಕಾನಂದ, ಅನ್ನ ಆಹಾರವಿಲ್ಲದೆ ಬರಿ ನೀರು ಕುಡಿದು ಜೀವಂತವಿದ್ದ. ಸಾಕು ನಾಯಿ ಯುವಕನನ್ನ 7 ದಿನದ ಬಳಿಕ ಕರೆದುಕೊಂಡು ಬಂದಿದೆ. ಇದರಿಂದ ಇಡೀ ಗ್ರಾಮಕ್ಕೆ ಅಚ್ಚರಿ ಮತ್ತು ಸಂತಸವಾಗಿದ್ದು, 50ಕ್ಕಿಂತ ಹೆಚ್ಚು ಬೈಕ್, ಟೆಂಪೋ, ಆಟೋರಿಕ್ಷಾಗಳ ಮೂಲಕ ಮೆರವಣಿಗೆ ಮಾಡಿದರು.

ತೆರೆದ ವಾಹನದಲ್ಲಿ ಚಿಂಟು ಮತ್ತು ವಿವೇಕಾನಂದ, ಕುಟುಂಬಸ್ಥರನ್ನು, ಆಪ್ತರನ್ನು, ಗೆಳೆಯರ ಬಳಗ ಮೆರವಣಿಗೆ ಮಾಡಿದೆ. ನಂತರ ಮನೆಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ರೀತಿಯಲ್ಲೇ ವಿವೇಕಾನಂದ ವಾಪಾಸ್ ಬಂದ ಖುಷಿಯನ್ನು ಆಚರಿಸಲಾಯಿತು. ಸುತ್ತಮುತ್ತಲ ಮನೆಯವರಿಗೆ, ಗೆಳೆಯರ ಬಳಗಕ್ಕೆ ಹಾಗೂ ಹುಡುಕಾಡಲು ಸಹಾಯ ಮಾಡಿದ ಎಲ್ಲರಿಗೆ ಶೀನಾ ನಾಯ್ಕ ಕುಟುಂಬ ಸಿಹಿಯೂಟ ಹಾಕಿಸಿದೆ.

ಯುವಕ ವಿವೇಕಾನಂದ ಕಣ್ಮರೆಯಾದ ನಂತರ ಜ್ಯೋತಿಷಿಗಳಲ್ಲಿ ಪ್ರಶ್ನಾ ಚಿಂತನೆ ಮಾಡಲಾಗಿತ್ತು. ದೇವಸ್ಥಾನ, ದೈವಗಳ ಮೊರೆ ಹೋಗಲಾಗಿತ್ತು. ಕುಟುಂಬಸ್ಥರು ಹರಕೆಯನ್ನು ಹೊತ್ತಿದ್ದರು. ತಮ್ಮ ಜಮೀನಿನಲ್ಲಿದ್ದ ಒಂದು ವಿಶೇಷ ಕಲ್ಲಿಗೆ ಪೂಜೆ ಪುನಸ್ಕಾರವನ್ನು ಕೂಡ ಕುಟುಂಬಸ್ಥರು ನೆರವೇರಿಸಿದ್ದಾರೆ. ಕಣ್ಮರೆಯಾಗುವ ಮೊದಲು ಆ ಯುವಕ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದು, ಆ ಕಲ್ಲಿನಲ್ಲಿ ದೈವೀಶಕ್ತಿ ಇರಬಹುದು ಎಂದು ಪೋಷಕರು ನಂಬಿದ್ದಾರೆ. ಈ ಘಟನೆಯ ಸತ್ಯಾಸತ್ಯತೆ ಕುರಿತಂತೆ ಚರ್ಚೆ ಕೂಡಾ ನಡೆಯುತ್ತಿದೆ.

- Advertisement -

Related news

error: Content is protected !!