Thursday, May 2, 2024
spot_imgspot_img
spot_imgspot_img

ಹಗಲು ಪೊಲೀಸ್ ಡ್ಯೂಟಿ, ರಾತ್ರಿಯಾಗ್ತಿದ್ದಂತೆ ಕಳ್ಳ- ಕಳ್ಳತನ ಮಾಡುತ್ತಿದ್ದ ಪೊಲೀಸ್ ಪೇದೆ ಅರೆಸ್ಟ್‌

- Advertisement -G L Acharya panikkar
- Advertisement -

ಬೆಂಗಳೂರು: ಜನರ ರಕ್ಷಣೆ ಮಾಡುವ ಪೊಲೀಸ್ ಪೇದೆಯೇ ರಾತ್ರಿ ರೈಲಿನಲ್ಲಿ ದರೋಡೆ ಕೋರನಾಗಿ ಬರುವ ವಿಚಾರವಂತೂ ಬಹಳ ಆಶ್ಚರ್ಯವನ್ನು ಹುಟ್ಟಿಸಿದ್ದು. ಸದ್ಯ ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ.

ಪೊಲೀಸಪ್ಪನ ಹೆಸರು ಸಿದ್ದರಾಮರೆಡ್ಡಿ ಎನ್ನಲಾಗಿದೆ. ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಮುಖ್ಯಪೇದೆಯಾಗಿ ಕೆಲಸ ಮಾಡುತ್ತಿದ್ದ. ಈತ ಮಧ್ಯರಾತ್ರಿ ಯಾದರೆ ಸಾಕು ಸಮೀಪದ ರೈಲ್ವೇ ಸ್ಟೇಶನ್ ಗಳಲ್ಲಿ ಕಳ್ಳತನ ಮಾಡಲು ಮುಂದಾಗುತ್ತಿದ್ದ. ಅಷ್ಟೇ ಅಲ್ಲ ಸಾಬಣ್ಣ ಎಂಬ ಎಂಓಬಿಯನ್ನ ಕಳ್ಳತನ ಮಾಡಲು ಇಟ್ಟುಕೊಂಡಿದ್ದ.

ಮಧ್ಯರಾತ್ರಿಯ ವೇಳೆ ಕೇರಳ, ತಮಿಳುನಾಡು ಮೂಲದ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡ್ತಾ ಇದ್ದ ಎನ್ನಲಾಗಿದೆ. ಈತ ಅವರಿಂದ ನಗದು ಹಣ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ.ಈ ಕುರಿತು ಸ್ಥಳೀಯ ರೈಲ್ವೇ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿ ಪೊಲೀಸ್ ಪೇದೆಯನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.

ಸದ್ಯ ಬೆಂಗಳೂರಿನ ರೈಲು ನಿಲ್ದಾಣ ಹಾಗೂ ಬೈಯಪ್ಪನಹಳ್ಳಿ ರೈಲ್ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪೇದೆ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ. ಇನ್ನು ಈ ವಿಚಾರ ಬಯಲಾಗುತ್ತಿದ್ದಂತೆಯೇ ಆರೋಪಿಯನ್ನು ಇಲಾಖೆಯಿಂದ ಅಮಾನತು ಮಾಡಲಾಗಿದೆ. ಇದೀಗ ಕಳ್ಳತನ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!