Monday, April 29, 2024
spot_imgspot_img
spot_imgspot_img

ಬಹುಪಯೋಗಿ ಕೊತ್ತಂಬರಿ ಸೊಪ್ಪು

- Advertisement -G L Acharya panikkar
- Advertisement -

ದಿನಂಪ್ರತಿ ಒಂದು ಲೋಟ ಈ ರೀತಿ ತಯಾರಿಸಿದ ಕೊತ್ತಂಬರಿ ಪೇಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಿ. ನಿಮ್ಮ ಮೂತ್ರ ವಿಸರ್ಜನೆಯ ವೇಳೆಗೆ ದೇಹದಲ್ಲಿನ ಅನಪೇಕ್ಷಿತ ಲವಣಗಳು ಹಾಗೂ ಸಂಗ್ರಹಿತ ಅಶುದ್ಧಗಳು ಹೊರಹೋಗುವದರ ಅನುಭವ ಸ್ವತಃ ನಿಮಗೇ ಆಗುತ್ತದೆ.

ಅನೇಕ ವರ್ಷಗಳಿಂದ ನಮ್ಮ ಮೂತ್ರಪಿಂಡವು ನಮಗಾಗಿ ನಮ್ಮ ದೇಹದಲ್ಲಿ ಸಂಗ್ರಹವಾಗುವ ಅನಪೇಕ್ಷಿತ ಲವಣಗಳನ್ನು ಹಾಗೂ ಸೂಕ್ಷ್ಮಜೀವಿಗಳನ್ನು ತನ್ನಲ್ಲಿ ತಡೆ ಹಿಡಿದು ನಮ್ಮ ಆರೋಗ್ಯರಕ್ಷ ಣೆ ಮಾಡುತ್ತಿರುತ್ತದೆ. ಅಂತಹ ಅತಿ ಮುಖ್ಯ ಅಂಗ ಮೂತ್ರಪಿಂಡವನ್ನು ಅತೀ ಕಡಿಮೆ ವೆಚ್ಚದಲ್ಲಿ ನಮ್ಮ ಮನೆಗಳಲ್ಲೇ ಶುದ್ಧೀಕರಿಸುವ ಸರಳ ವಿಧಾನ ಹೀಗಿದೆ.

ಸ್ವಚ್ಛವಾಗಿ ತೊಳೆದ ತಾಜಾ ಕೊತ್ತಂಬರಿ ಕಟ್ಟನ್ನು ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ಒಂದು ತಪ್ಪಲೆಯಲ್ಲಿ ಹಾಕಿ ಶುದ್ಧ ನೀರಿನಲ್ಲಿ ಬಿಸಿ ಮಾಡಿ, ಹತ್ತು ನಿಮಿಷ ಕುದಿಸಿ ನಂತರ ಆರಿಸಿ. ಅದನ್ನು ಸೋಸಿ, ಸ್ವಚ್ಛವಾದ ಉತ್ತಮ ದರ್ಜೆಯ ಬಾಟಲಿ ಅಥವಾ ಪಾತ್ರೆಯಲ್ಲಿ ಹಾಕಿ ಫ್ರಿಜ್‌ನಲ್ಲಿಡಿ.

ಕೊತ್ತಂಬರಿ ಸೊಪ್ಪನ್ನು ಜಗಿಯುತ್ತಿದ್ದರೆ ದಂತಕ್ಷಯ ನಿವಾರಣೆಯಾಗುತ್ತದೆ. ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು, ಪುಡಿ ಮಾಡಿ, ಅದಕ್ಕೆ ಉಪ್ಪಿನಪುಡಿ ಬೆರೆಸಿ, ದಿನವೂ ಹಲ್ಲುಜ್ಜುವುದರಿಂದ ಹಲ್ಲುನೋವು ಮಾಯವಾಗುತ್ತದೆ. ವಸಡುಗಳು ಊದಿಕೊಂಡು ಹಲ್ಲುನೋವು ಉಂಟಾದಾಗ, ಹತ್ತಿಯನ್ನು ಜೇನುತುಪ್ಪದಲ್ಲಿ ಅದ್ದಿ ದಿನಕ್ಕೆ ನಾಲ್ಕೈದು ಬಾರಿ ಇಟ್ಟುಕೊಳ್ಳುತ್ತಿದ್ದರೆ ಹಲ್ಲು ನೋವು, ವಸಡಿನ ಊತ ಕಡಿಮೆ ಆಗುವುದು. ತೆಂಗಿನ ಚಿಪ್ಪು ಸುಟ್ಟು, ಬೂದಿ ಮಾಡಿ ಹಲ್ಲುಜ್ಜುತ್ತಿದ್ದರೆ ದಂತಕ್ಷಯ ನಿವಾರಣೆ ಆಗುವುದು.

ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಭಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.
ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆಹಾಕಬೇಕು. ಚೆನ್ನಾಗಿ ಕಿವಿಚಿ ಸೋಸಬೇಕು. ಈ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.

- Advertisement -

Related news

error: Content is protected !!