Saturday, June 28, 2025
spot_imgspot_img
spot_imgspot_img

ಕಾಸರಗೋಡು: ಬಸ್ಸಿನಡಿಗೆ ಸಿಲುಕಿ ಮಹಿಳೆ ದುರ್ಮರಣ, ಜೊತೆಗಿದ್ದ ಬಾಲಕ ಪಾರು

- Advertisement -
- Advertisement -

ಕಾಸರಗೋಡು: ಬಸ್ಸಿನಡಿಗೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸೋಮವಾರ ಮಧ್ಯಾಹ್ನ ಚೆರ್ವತ್ತೂರಿನಲ್ಲಿ ನಡೆದಿದೆ.

ಪಡನ್ನಕಾಡಿನ ಫೌಝಿಯಾ (53) ಮೃತ ಮಹಿಳೆ.

ಬಸ್ಸು ನಿಲ್ದಾಣದಲ್ಲಿ ಬಸ್ಸು ಹಿಂದಕ್ಕೆ ತೆಗೆಯುತ್ತಿದ್ದಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಬಸ್ಸಿನಡಿಗೆ ಸಿಲುಕಿದ್ದು, ಜೊತೆಗಿದ್ದ ಎಂಟು ವರ್ಷದ ಬಾಲಕ ಅಪಾಯ ದಿಂದ ಪಾರಾಗಿದ್ದಾನೆ. ಪಯ್ಯನ್ನೂರಿ ಗೆ ತೆರಳುತ್ತಿದ್ದ ಖಾಸಗಿ ಬಸ್ಸು ಈ ಅಪಘಾತಕ್ಕೆ ಕಾರಣವಾಗಿದೆ
ಚಿಮೇನಿ ಯಲ್ಲಿರುವ ಪುತ್ರಿಯ ಮನೆಗೆ ತೆರಳಲು ಬಸ್ಸು ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ.ಗಂಭೀರ ಗಾಯಗೊಂಡ ಮಹಿಳೆಯನ್ನು ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಳಿಲ್ಲ. ಚಂದೇರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

- Advertisement -

Related news

error: Content is protected !!