- Advertisement -
- Advertisement -




ಹಾವೇರಿ: ರಸ್ತೆ ದಾಟುವ ವೇಳೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಹಾವೇರಿ ನಗರದ ವಾಲ್ಮೀಕಿ ವೃತ್ತದ ಬಳಿ ನಡೆದಿದೆ.
ಮೃತಪಟ್ಟ ಮಹಿಳೆ ಇಜಾರಿ ಲಕಮಾಪುರದ ನಿವಾಸಿ ಜಯಮ್ಮಕೂಳೇನೂರ (31) ಎಮದು ಗುರುತಿಸಲಾಗಿದೆ.
ಸರ್ಕಾರಿ ಮಹಿಳಾ ಹಾಸ್ಟೆಲ್ ನಲ್ಲಿ ಅಗುಡೆ ಕೆಲಸ ಮಾಡುತ್ತಿದ್ದರು. ಪತಿ ರಸ್ತೆ ಪಕ್ಕ ನಿಂತು ಕರೆದ ಕಾರಣ ರಸ್ತೆ ದಾಟಲು ಹೋಗಿದ್ದ ಮಹಿಳೆಗೆ ಹುಬ್ಬಳ್ಳಿ ಯಿಂದ ಹಾವೇರಿಯತ್ತ ಬರುತ್ತಿದ್ದ ಸಾರಿಗೆ ಬಸ್ ಢಿಕ್ಕಿಯಾಗಿದೆ. ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
- Advertisement -








