Sunday, May 12, 2024
spot_imgspot_img
spot_imgspot_img

ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ

- Advertisement -G L Acharya panikkar
- Advertisement -
vtv vitla

ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಮುನ್ರಿಕಾ ಪ್ರದೇಶದಲ್ಲಿ ನಡೆದಿದೆ.

ದೆಹಲಿ ಪೊಲೀಸರು ಮೃತ ದೇಹಗಳನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆಯನ್ನು ವರ್ಷಾ ಶರ್ಮಾ ಎಂದು ಗುರುತಿಸಲಾಗಿದ್ದು, ದೆಹಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಲ್ಲಿ (ಎನ್‌ಸಿಬಿ) ಕಾನ್ಸ್‌ ಟೇಬಲ್ ಆಗಿರುವ ಜಗೇಂದ್ರ ಶರ್ಮಾ ಅವರ ಪತ್ನಿ.

ಮೃತ ಮಹಿಳೆಯು 27 ವರ್ಷ ವಯಸ್ಸಿನವಳಾಗಿದ್ದು, 2017 ರಲ್ಲಿ ಕಾನ್‌ಸ್ಟೆಬಲ್‌ನೊಂದಿಗೆ ವಿವಾಹವಾಗಿದ್ದಳು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ಬನಿಗೆ ನಾಲ್ಕು ವರ್ಷ ಮತ್ತು ಇನ್ನೊಬ್ಬನಿಗೆ ಎರಡೂವರೆ ವರ್ಷ. ಆಕೆ ತನ್ನ ಕೋಣೆಯ ಬಾಗಿಲಿಗೆ ಬೀಗ ಹಾಕಿದಳು ಮತ್ತು ಹರಿತವಾದ ಆಯುಧದಿಂದ ಅವರ ಮಣಿಕಟ್ಟನ್ನು ಸೀಳಿ ಕೊಂದಳು. ಬಳಿಕ ಹರಿತವಾದ ಆಯುಧದಿಂದ ತನ್ನ ಮಣಿಕಟ್ಟನ್ನು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಾಗಿಲು ಒಡೆದು ಒಳ ನುಗ್ಗಿ ನೋಡಿದಾಗ ಮೃತದೇಹಗಳು ಬೆಡ್ ಮೇಲೆ ಬಿದ್ದಿರುವುದು ಬೆಳಕಿಗೆ ಬಂದಿದೆ.

ಕೊಲೆ ಮತ್ತು ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಮತ್ತು ಕೊಲೆಯ ಮಾಹಿತಿ ಬಹಿರಂಗವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!