Friday, June 27, 2025
spot_imgspot_img
spot_imgspot_img

ನೂತನ ಆಸ್ಪತ್ರೆ ಕಟ್ಟಡದಿಂದ ಆಯ ತಪ್ಪಿ ಬಿದ್ದು ಕಾರ್ಮಿಕ ಸಾವು

- Advertisement -
- Advertisement -

ನೂತನವಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆಯ ಕಟ್ಟಡ ದಿಂದ ಆಯ ತಪ್ಪಿ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ.

ಕೋಲ್ಕತಾ ಮೂಲದ ಕಾರ್ಮಿಕ ರಾಕಿಬ್ (22) ಮೃತರು.

ಅವರು ಆಸ್ಪತ್ರೆಯ ಕಿಟಕಿ ಕೆಲಸ ಮಾಡಲು ಮುಂದಾಗಿದ್ದ ಸಂದರ್ಭ ಹೊರ ಭಾಗದಲ್ಲಿ ಹಾಕಿದ್ದ ಸ್ಟೇಜ್‌ನಿಂದ ಬಿದ್ದಿದ್ದಾರೆ. 30 ಅಡಿ ಎತ್ತರದಿಂದ ಸಿಮೆಂಟ್ ನೆಲಕ್ಕೆ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದೇ ಈ ಅನಾಹುತಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!