Tuesday, April 30, 2024
spot_imgspot_img
spot_imgspot_img

ವಿವಾಹ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ..!

- Advertisement -G L Acharya panikkar
- Advertisement -

ವಿವಾಹ ನಿಶ್ಚಯವಾಗಿದ್ದ ಯುವಕ ವಯಸ್ಸಲ್ಲಿ ತುಂಬಾ ದೊಡ್ಡ ಎಂದು ನಿಶ್ಚಿತಾರ್ಥ ಆಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದ ರಾಮನಗರದಲ್ಲಿ ನಡೆದಿದೆ.

ಬಿ.ಬಿ.ಮುಸ್ಕಾನ್ (20) ಮೃತ ಯುವತಿ. ಮುಸ್ಕಾನ್ ಪ್ಯಾರ ಮೆಡಿಕಲ್ ಕೋರ್ಸ್ ಕಲಿಯುತ್ತಿದ್ದಳು. ಇದೇ ವೇಳೆ ಆಕೆಗೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ವಿವಾಹ ನಿಶ್ಚಯವಾಗಿದ್ದ ಯುವಕನಿಗೆ ಮತ್ತು ಆಕೆಗೆ ವಯಸ್ಸಿನ ಅಂತರ ಹೆಚ್ಚಾದ ಹಿನ್ನೆಲೆ ಈ ಮದುವೆಗೆ ನಿರಾಕರಿಸಿದ್ದಳು. ಆದರೆ ಕುಟುಂಬಸ್ಥರ ಒತ್ತಾಯದಿಂದ ಈ ಮದುವೆಗೆ ಒಪ್ಪಿಕೊಂಡಿದ್ದಳು. ಮನೆಯವರ ಬಲವಂತಕ್ಕೆ ಮದುವೆಗೆ ಒಪ್ಪಿಕೊಂಡಿದ್ದವಳು ಆದರೆ ಇದೀಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

- Advertisement -

Related news

error: Content is protected !!