Monday, May 13, 2024
spot_imgspot_img
spot_imgspot_img

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ; ಲವ್ ಜಿಹಾದ್‌ ವಿರುದ್ಧ ಠಾಣಾ ಮೆಟ್ಟಿಲೇರಿದ ಯುವತಿ

- Advertisement -G L Acharya panikkar
- Advertisement -

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲವ್ ಜಿಹಾದ್ ಸದ್ದು ಮತ್ತೇ ಕೇಳಿ ಬಂದಿದೆ. ಪ್ರೀತಿಯ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿ ಲವ್ ಜಿಹಾದ್‌ಗಾಗಿ ತನ್ನ ದೈಹಿಕ ಸಂಪರ್ಕಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಟೆಕ್ಕಿಯೊಬ್ಬರು ಠಾಣೆಯ ಮೆಟ್ಟಿಲೇರಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಸಮೀಪದ ಶಿಕಾರಿಪಾಳ್ಯದಲ್ಲಿ ವಾಸವಿದ್ದ ಕಾಶ್ಮೀರಿ ಮೊಜೀಫ್ ಅಶ್ರಫ್ ಬೇಗ್‌ಗೆ ಟೆಕ್ಕಿ ಯುವತಿಯ ಪರಿಚಯವಾಗಿದೆ. ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿ ಪ್ರೇಮಾಂಕುರವಾಗಿದೆ‌. ಅನಂತರ ಮದುವೆ ವಿಚಾರ ಕೂಡ ಇಬ್ಬರಲ್ಲೂ ಪ್ರಸ್ತಾಪವಾಗಿದೆ‌. ಆಗ ಮದುವೆಯಾಗುವುದಾಗಿ ಯುವತಿಯನ್ನ ನಂಬಿಸಿ ಆಕೆಯ ಜೊತೆ ಆರೋಪಿ ದೈಹಿಕ ಸಂಪರ್ಕ ಮಾಡಿದ್ದಾನೆ.

ಯುವತಿಯನ್ನು ಪ್ರೀತಿಸಿದ್ದ ಅಸಾಮಿ ಯಾವುದೇ ಧಾರ್ಮಿಕ ಕಟ್ಟುಪಾಡುಗಳು ಇಲ್ಲದೇ ಕೋರ್ಟ್‌ನಲ್ಲಿ ಮದುವೆಯಾಗೋಣ ಎನ್ನುವ ಭರವಸೆಯನ್ನು ಕೂಡ ನೀಡಿದ್ದ. ಮದುವೆ ಹೆಸರಲ್ಲಿ ಯುವತಿಯ ಜೊತೆ ಎರಡು ಬಾರಿ ಬಲಾತ್ಕಾರವಾಗಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಬೇರೆ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನ ಕೂಡ ಮಾಡಿದ್ದ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ‌.

ಯಾವಾಗ ಮತಾಂತರದ ವಿಚಾರ ಪ್ರಸ್ತಾಪ ಬಂತೋ ತಕ್ಷಣ ಯುವತಿ ಇದಕ್ಕೆ ನಿರಾಕರಿಸಿದ್ದಾಳೆ. ಆಗ ಮೊಜೀಫ್ ಅಶ್ರಫ್ ಬೇಗ್ ಸಹೋದರ ಮೋರಿಫ್ ಅಶ್ರಫ್ ಯುವತಿಗೆ ಕರೆ ಮಾಡಿ ತನ್ನ ಸಹೋದರನನ್ನು ಬಿಡುವಂತೆ ಜೀವ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಮೊದಲು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಹೆಬ್ಬಗೋಡಿ ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ‌.

ಯುವತಿ ಹೇಳಿಕೆ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಐಪಿಸಿ ಸೆಕ್ಷನ್ 506, 34, 376,377, 420,417 ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ರಕ್ಷಣಾ ಕಾಯ್ದೆ 2022ರ ಅಡಿ ಎಫ್ಐಆರ್ ದಾಖಲು ಮಾಡಿದ್ದಾರೆ. ಆರೋಪಿ ಟೆಕ್ಕಿ ಪತ್ತೆಗೆ ಬಲೆ ಬೀಸಿದ ಪೊಲೀಸರು ಕಾಶ್ಮೀರಕ್ಕೆ ತೆರಳಿ ಹುಡುಕಾಟ ನಡೆಸಿದ್ದಾರೆ.

- Advertisement -

Related news

error: Content is protected !!