Monday, July 7, 2025
spot_imgspot_img
spot_imgspot_img

ಅಳಿಕೆ: 15 ನೇ ಹಣಕಾಸು ಯೋಜನೆ ಹಾಗೂ ಉದ್ಯೋಗ ಖಾತರಿ ಯೋಜನೆಯ ಅನುದಾನದಿಂದ ನಿರ್ಮಾಣಗೊಂಡ ಗ್ರಾ.ಪಂ ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆ

- Advertisement -
- Advertisement -

ಅಳಿಕೆ ಗ್ರಾಮ ಪಂಚಾಯತ್ ನಿಂದ, 15 ನೇ ಹಣಕಾಸು ಯೋಜನೆಯಡಿ ಮತ್ತು ಉದ್ಯೋಗ ಖಾತರಿ ಯೋಜನೆಯ ಅನುದಾನದಿಂದ ಎರುoಬು ಶಂಕರ ನಾರಾಯಣ ದೇವಸ್ಥಾನ ರಸ್ತೆಗೆ ಮೀಸಲಿಟ್ಟ ರೂ.3.5 ಲಕ್ಷ ಅನುದಾನದಿಂದ ನಿರ್ಮಾಣಗೊಂಡ ಗ್ರಾಮ ಪಂಚಾಯತ್ ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆ ನಡೆಯಿತು.

ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರು ಪದ್ಮನಾಭ ಪೂಜಾರಿ ಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎರುoಬು ವಿಷ್ಣುಮೂರ್ತಿ ದೇವಸ್ಥಾನದಿನ ಬಳಿ ಅಳಿಕೆ ಗ್ರಾಮ ಪಂಚಾಯತ್ ನಿಂದ ರೂ. 2.00 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಶಾಚಾಲಯವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಅಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಶೆಟ್ಟಿ, ಸೀತಾರಾಮ ಶೆಟ್ಟಿ, ಸದಾಶಿವ ಶೆಟ್ಟಿ, ಸುಕುಮಾರ. ಎಮ್, ಶ್ರೀಮತಿ. ಭಾಗೀರಥಿ, ಶ್ರೀಮತಿ. ಶಾಂಭವಿ ಗ್ರಾಮಸ್ಥರಾದ ಬಾಲಕೃಷ್ಣ ಕಾರಾಂತ ಎರುoಬು, ಗೋಪಾಲ ಮನಿಯಾನಿ, ಜಯರಾಮ ಎರುoಬು, ವಸಂತ, ಮೋಹನದಾಸ. ರೈ ಎರುoಬು, ಸದಾಶಿವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಾಮಚಂದ್ರ ಬಲ್ಲಾಳ್, ಸುರೇಶ ಮಾಡಿಯಾಲ, ವಿನಯ ರೈ, ಸವಿತಾ, ತುಳಸಿ ಮುಳಿಯ, ಗೀತಾ ಮುಳಿಯ, ಸುನೀತಾ, ಕೀರ್ತನ್ ಸಣ್ಣಗುತ್ತು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಧನಂಜಯ ಮತ್ತಿತರು ಉಪಸ್ಥಿತರಿದ್ದರು.

ಪಂಚಾಯತ್ ಸದಸ್ಯ ಸದಾಶಿವ ಶೆಟ್ಟಿ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಧನಂಜಯ ಧನ್ಯವಾದ ನೀಡಿದರು.

- Advertisement -

Related news

error: Content is protected !!