Sunday, June 29, 2025
spot_imgspot_img
spot_imgspot_img

ಮಹಡಿ ಮೇಲಿಂದ ಬಿದ್ದ ಎಸಿ ಬಾಕ್ಸ್​; ಓರ್ವ ಸಾವು, ಮತ್ತೋರ್ವ ಗಂಭೀರ..!

- Advertisement -
- Advertisement -

ದೆಹಲಿ: ಆಕಸ್ಮಿಕವಾಗಿ ಎಸಿ ಬಾಕ್ಸ್ ಎರಡನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ದೆಹಲಿಯ ರೋಲ್‌ಬಾಗ್‌ ಪ್ರದೇಶದ ಸಮೀಪ ನಡೆದಿದೆ.

ಮೃತಪಟ್ಟ ಯುವಕ ಜಿತೇಶ್ ಹಾಗೂ ಗಂಭೀರ ಗಾಯಗೊಂಡ ಯುವಕ ಪ್ರಾಂಶು ಎಂದು ಗುರುತಿಸಲಾಗಿದೆ.

ಇಬ್ಬರು ಸ್ನೇಹಿತರು ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದಾಗ ಹೊರಗೆ ಅಳವಡಿಸಿದ್ದ ಎಸಿ ಬಾಕ್ಸ್ ಬಿದ್ದಿದೆ. ಜಿತೇಶ್ ಎಂಬಾತ ಸ್ಕೂಟರ್‌ನಲ್ಲಿ ಕುಳಿತು ಪ್ರಾಂಶು ಅವರೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ವೇಳೆ ವೈದ್ಯರು ಜಿತೇಶ್ ಮೃತಪಟ್ಟಿದ್ದು, ಪ್ರಾಂಶು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125 (ಎ) (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಮತ್ತು 106 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!