Tuesday, July 28, 2026
spot_imgspot_img
spot_imgspot_img

ಸುಳ್ಯ: ಕೋಡಂಕೇರಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಮುಖಾಮುಖಿ ಡಿಕ್ಕಿ ಮಹಿಳೆ ಮೃತ್ಯು, ಹಲವು ಮಂದಿಗೆ ಗಾಯ – ಆಸ್ಪತ್ರೆಗೆ ದಾಖಲು

- Advertisement -
- Advertisement -

ಸುಳ್ಯ: ಆರಂತೋಡು ಗ್ರಾಮದ ಕೋಡಂಕೇರಿ ಎಂಬಲ್ಲಿ, ಕೆ.ಎಸ್.ಆರ್.ಟಿ.ಸಿ ಬಸ್ ಮುಖಮುಖಿ ಡಿಕ್ಕಿಯಾದ ಘಟನೆ ವರದಿಯಾಗಿದೆ.

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಂಕೇರಿ ಎಂಬಲ್ಲಿ ದಿನಾಂಕ 25.06.2025 ರಂದು ಸಂಜೆ ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ KA 21 F 0069 ನೋಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್ ಗೆ, ಮಡಿಕೇರಿ ಕಡೆಯಿಂದ – ಸುಳ್ಯ ಮಾರ್ಗವಾಗಿ ಬರುತ್ತಿದ್ದ KA 19 F 3620 ನೊಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದಾಗಿ ಅಪಘಾತವಾಗಿದೆ. ಅಪಘಾತದಲ್ಲಿ ಮಡಿಕೇರಿ ಕುಶಾಲನಗರ ಮೂಲದ ಭಾರತಿ (50) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, 02 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುತ್ತದೆ. ಪ್ರಯಾಣಿಕರ ಪೈಕಿ 17 ಜನರಿಗೆ ಸಾಮಾನ್ಯ ಗಾಯಗಳಾಗಿದ್ದು, ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಸುಳ್ಯ ವೃತ್ತ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ಭೇಟಿ ನೀಡಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು. ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ.

- Advertisement -

Related news

error: Content is protected !!