Monday, July 7, 2025
spot_imgspot_img
spot_imgspot_img

ಕೊಲ್ಲೂರು: ಕಾಂತಾರ ಚಿತ್ರ ತಂಡದ ಮಿನಿ ಬಸ್ ಅಪಘಾತ

- Advertisement -
- Advertisement -

ಕೊಲ್ಲೂರು: ಹಾಲ್ಕಲ್‌ನ ಆನೆಝರಿ ಎನ್ನುವಲ್ಲಿ ಕಾಂತಾರ-1 ಚಿತ್ರ ತಂಡದ ಮಿನಿ ಬಸ್‌ ಗೆ ಸ್ಕೂಟರ್‌ ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸುವ ಭರದಲ್ಲಿ ವಾಹನ ರಸ್ತೆ ಪಕ್ಕಕ್ಕೆ ಸರಿದ ಘಟನೆ ರವಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಸಂಭವಿಸಿದೆ.

ವಾಹನದಲ್ಲಿ ಕಾಂತಾರ-1 ಚಿತ್ರ ತಂಡದ ತಾಂತ್ರಿಕ ವಿಭಾಗದವರು ಮತ್ತು ಸಹಕಲಾವಿದರು ಇದ್ದರು.ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ಠಾಣೆಯಲ್ಲಿ ದಾಖಲಾಗಿಲ್ಲ. ಮಿನಿಬಸ್‌ ಚಾಲಕನ ನಿರ್ಲಕ್ಷ್ಯ ಆರೋಪಿಸಿ ಚಾಲಕ ಮತ್ತು ಅದರಲ್ಲಿದ್ದ ಸಹ ಕಲಾವಿದರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!