Saturday, June 28, 2025
spot_imgspot_img
spot_imgspot_img

ಬಸ್ ಮತ್ತು ಬೈಕ್ ನಡುವೆ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು..!

- Advertisement -
- Advertisement -

ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ನಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ನಗರದ ನೀರಮಾನ್ವಿ ಬಳಿಯ ರಾಯಚೂರು-ಬೆಂಗಳೂರು ಹೆದ್ದಾರಿಯಲ್ಲಿ‌ ನಡೆದಿದೆ.

ಮೃತಪಟ್ಟ ಯುವಕ ಬೈಕ್ ಸವಾರ ರವಿ (25) ಎಂದು ಗುರುತಿಸಲಾಗಿದೆ.

ಮಾನ್ವಿಯಿಂದ ರಾಯಚೂರ ಕಡೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಎದುರಿಗೆ ಪಲ್ಸರ್ ಬೈಕ್ ಡಿಕ್ಕಿಯಾಗಿ ಘಟನೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಬೈಕ್ ಸವಾರ ಕೊನೆಯುಸಿರೆಳೆದಿದ್ದಾನೆ. ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದ ಯುವಕ, ಇತ್ತೀಚಿಗೆ ಸಿರವಾರ ಪಟ್ಟಣದಲ್ಲಿ ಅಂಗಡಿ ಓಪನ್ ಮಾಡಿದ್ದ. 8 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!