- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ನಟ ಚಿರಂಜೀವಿ ಸರ್ಜಾ ವಿಧಿವಶರಾಗಿ ಇಂದಿಗೆ ಒಂದು ತಿಂಗಳು.ಹೀಗಾಗಿ ಗೆಳೆಯ ಪನ್ನಗಾಭರಣ ಅವರ ಹೊಸಕೆರೆಹಳ್ಳಿಯ ಮನೆಯಲ್ಲಿ ಸ್ನೇಹಿತರೆಲ್ಲರು ಒಟ್ಟುಗೂಡಿ ಚಿರು ಪುಣ್ಯಸ್ಮರಣೆ ಮಾಡಿದರು.ಪನ್ನಗಾಭರಣ ಮನೆಯಲ್ಲಿ ಚಿರು ಪೇವರೇಟಿವ್ ಜಾಗದಲ್ಲಿ ಅವರ ಫೋಟೋ ಇಡಲಾಗಿದ್ದು, ಇವರಿಗೆ ಇಷ್ಟವಾಗಿದ್ದ ತಿಂಡಿ ತಿನಿಸುಗಳನ್ನು ಇಟ್ಟು ಆತ್ಮೀಯ ಗೆಳೆಯರು ಪೂಜೆ ಸಲ್ಲಿಸಿದರು. ಈ ವೇಳೆ ಚಿರು ಪತ್ನಿ ಮೇಘನಾ ರಾಜ್, ಪನ್ನಗಾಭರಣ, ಪ್ರಜ್ವಲ್ ದೇವರಾಜ್, ರಾಗಿಣಿ ಪ್ರಜ್ವಲ್ ಸೇರಿದಂತೆ ಚಿರು ಆತ್ಮೀಯ ಗೆಳೆಯರು ಭಾಗಿಯಾಗಿದ್ದರು.
ಧ್ರುವ ಫಾರ್ಮ್ ಹೌಸ್ ನಲ್ಲಿ ಚಿರು ಸಮಾಧಿಗೆ ಪೂಜೆ:
ಮತ್ತೊಂದುಕಡೆ ಕುಟುಂಬಸ್ಥರು ನೆಲಗುಳಿಯಲ್ಲಿರುವ ಧ್ರುವ ಫಾರ್ಮ್ ಹೌಸ್ ನಲ್ಲಿ ಪೂಜೆ ಸಲ್ಲಿಸಿದ್ದಾರೆ. ಧ್ರವ ಸರ್ಜಾ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಪೂಜೆ ವೇಳೆ ಧ್ರುವ ಸರ್ಜಾ ಕಣ್ಣೀರಿಟ್ಟಿದ್ದಾರೆ.
- Advertisement -