Friday, July 4, 2025
spot_imgspot_img
spot_imgspot_img

ಪತ್ನಿಯೊಂದಿಗೆ ಚಾಮುಂಡಿ ತಾಯಿ ದರ್ಶನ ಪಡೆದ ನಟ ದರ್ಶನ್

- Advertisement -
- Advertisement -

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರದಂದು ಬೆಳ್ಳಂಬೆಳಗ್ಗೆ ನಟ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ದಂಪತಿ ಸಮೇತ ಚಾಮುಂಡಿ ತಾಯಿಯ ದರ್ಶನ ಪಡೆದು ವಾಪಸ್ ಆಗಿದ್ದಾರೆ. ಈ ವೇಳೆ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಸಾಥ್‌ ನೀಡಿದ್ದಾರೆ.

ಪ್ರತಿ ವರ್ಷವೂ ಆಷಾಢದಲ್ಲಿ ದರ್ಶನ್ ಚಾಮುಂಡಿಯ ಆಶೀರ್ವಾದ ಪಡೆಯುತ್ತಾರೆ. ಕಳೆದ ಬಾರಿ ಜೈಲಿನಲ್ಲಿದ್ದ ಕಾರಣ ದೇವಿಯ ದರ್ಶನ ಮಾಡಿರಲಿಲ್ಲ. ಹಾಗಾಗಿ ಇಂದು ಚಾಮುಂಡಿ ಬೆಟ್ಟಕ್ಕೆ ದರ್ಶನ್‌ ಭೇಟಿ ನೀಡಿದ್ದರು. ದೇವಸ್ಥಾನಕ್ಕೆ ತೋತಾಪುರಿ ಮೇಕೆಜೋಳ ಹಾಗೂ ಕಮಲದ ಹೂವಿನ ಅಲಂಕಾರ ಮಾಡಲಾಗಿದೆ. ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರು ಬಂದಿದ್ದಾರೆ.

ಬೆಳಗ್ಗೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನಡೆಯುತ್ತಿದ್ದು, ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರವೇ ಹರಿದು ಬಂದಿದೆ. ಗರ್ಭ ಗುಡಿಯ ಚಾಮುಂಡಿ ತಾಯಿ ಲಕ್ಷ್ಮೀ ಅಲಂಕಾರದಿಂದ‌ ಕಂಗೊಳಿಸುತ್ತಿದೆ. ಬೆಳಗ್ಗೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಮಾಡಲಾಗುತ್ತಿದ್ದು, ಸರತಿ ಸಾಲಿನಲ್ಲಿ ಭಕ್ತರು ನಿಂತು ತಾಯಿ ದರ್ಶನ ಪಡೆಯುತ್ತಿದ್ದಾರೆ. ಮುಂಜಾನೇ 5 ಗಂಟೆಯಿಂದ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಿಲಾಗಿದ್ದು, ವಿವಿಧ ಬಗೆಯ ಹೂ ಹಾಗೂ ಮಾವಿನ ಕಾಯಿಯಿಂದ ದೇವಾಲಯದ ಆವರಣವನ್ನು ಅಲಂಕಾರ ಮಾಡಲಾಗಿದೆ.

- Advertisement -

Related news

error: Content is protected !!