Monday, April 29, 2024
spot_imgspot_img
spot_imgspot_img

ಪತಿಯ ಕಿರುಕುಳಕ್ಕೆ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್‌ ನಟಿ

- Advertisement -G L Acharya panikkar
- Advertisement -
vtv vitla

ಸ್ಯಾಂಡಲ್‌ವುಡ್‌ ನಟಿ ನೈನಾ ಸರ್ವಾರ್ ದೌರ್ಜನ್ಯ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿ ಪತಿ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಐದು ವರ್ಷದ ಹಿಂದೆ ನಟಿ ನೈನಾ ಉದ್ಯಮಿ ರಾಹುಲ್ ಅವರನ್ನು ಮದ್ವೆಯಾಗಿದ್ದರು. ಕೆಲಸವಿಲ್ಲದೆ ಮನೆಯಲ್ಲಿಯೇ ಇರ್ತಿದ್ದ ಪತಿ ರಾಹುಲ್ ನನ್ನ ಮೇಲೆ ದೈಹಿಕ ಹಲ್ಲೆ, ಅಸಭ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ಗಂಡನ ವಿರುದ್ಧ ಆರೋಪ ಮಾಡಿದ್ದಾರೆ. ಜೊತೆಗೆ ಬಸವೇಶ್ವರನಗರ ಠಾಣೆಯಲ್ಲಿ ದೂರು ನೀಡಿ ಎಫ್​ಐಆರ್​ ದಾಖಲಿಸಿದ್ದಾರೆ.

ನೇಹಾ ಸರ್ವಾರ್​ 4 ಕನ್ನಡ, 2 ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಬೆತ್ತನಗೆರೆ, ಲೂಸ್ ಮಾದ ಆಭಿನಯದ ನಟೆ, ಶ್ರೀನಗರ ಕಿಟ್ಟಿ ಅಭಿನಯದ ಏ ರಾಮ್ ಮತ್ತು ತಮಿಳಿನ ಊಟಿ ಸೇರಿ 6 ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

- Advertisement -

Related news

error: Content is protected !!