Saturday, June 28, 2025
spot_imgspot_img
spot_imgspot_img

ನಟಿ ರನ್ಯಾ ರಾವ್ ಗೋಲ್ಡ್​ ಸ್ಮಗ್ಲಿಂಗ್ ಪ್ರಕರಣ: ಉದ್ಯಮಿ ಪುತ್ರ ಅರೆಸ್ಟ್‌..!

- Advertisement -
- Advertisement -

ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್​ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಚಿವರಿಬ್ಬರ ಕೈವಾಡವಿದೆ ಎಂದು ಬಿಜೆಪಿ ಬಾಂಬ್ ಸಿಡಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಈ ನಡುವೆ ಡಿಆರ್​​ಐ ಅಧಿಕಾರಿಗಳಿಂದ ಫೈಸ್ಟಾರ್ ಹೋಟೆಲ್ ಮಾಲೀಕನ ತಮ್ಮನ ಮಗ ತರುಣ್ ರಾಜು ಎಂಬುವವರನ್ನು ಬಂಧಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್​​ ಅವರೊಂದಿಗೆ ಉದ್ಯಮಿ ಪುತ್ರ ತರುಣ್ ಹೆಸರು ಕೇಳಿಬಂದಿತ್ತು.

ಹೀಗಾಗಿ ವಿಚಾರಣೆ ಮಾಡಿದ ಅಧಿಕಾರಿಗಳು ನಂತರ ಬಂಧಿಸಿದ್ದಾರೆ. ಇನ್ನು ನಟಿ ರನ್ಯಾ ರಾವ್ ಮತ್ತು ತರುಣ್ ರಾಜು ಇಬ್ಬರು ವರ್ಷಗಳಿಂದ ಸ್ನೇಹಿತರಾಗಿದ್ದರು. ರನ್ಯಾ ರಾವ್​ರಿಂದ ತರುಣ್ ರಾಜು ಚಿನ್ನ ತರಿಸಿಕೊಳ್ಳುತ್ತಿದ್ದರು.

ರನ್ಯಾ ರಾವ್​ ಚಿನ್ನದ ಸ್ಮಗ್ಲಿಂಗ್ ಬಗ್ಗೆ ಡಿಆರ್​​ಐ ಕೋರ್ಟ್​ಗೆ ಇಂಚಿಂಚಾಗಿ ಮಾಹಿತಿ ನೀಡಿದೆ. ಬರೋಬ್ಬರಿ 12 ಕೋಟಿ 56 ಲಕ್ಷ ರೂ. ಮೌಲ್ಯದ ಚಿನ್ನ ಸ್ಮಗ್ಲಿಂಗ್ ಆಗಿದ್ದು, ಸ್ಮಗ್ಲಿಂಗ್​ ಕೇಸ್​​ನಲ್ಲಿ ರನ್ಯಾ ಪ್ರಮುಖ ಪಾತ್ರಧಾರಿ ಎಂದು ಉಲ್ಲೇಖ ಮಾಡಲಾಗಿದೆ. ಟಿಶ್ಯೂ ಪೇಪರ್ ಆ್ಯಂಡ್​ ಬ್ಯಾಂಡೇಜ್​ ಬಳಸಿ ಚಿನ್ನ ಸಾಗಾಟ ಮಾಡಿದ್ದಾರೆ. ಚಿನ್ನ ಸಾಗಾಟ ಕೇಸ್​​ನಲ್ಲಿ ದೊಡ್ಡಮಟ್ಟದಲ್ಲಿ​ ಸದಸ್ಯರಿರುವ ಮಾಹಿತಿ ಹೊರಬಿದ್ದಿದೆ.

- Advertisement -

Related news

error: Content is protected !!