Wednesday, July 2, 2025
spot_imgspot_img
spot_imgspot_img

ಅತ್ಯಾಚಾರಕ್ಕೆ ಸಹಕರಿಸದ ಅಪ್ರಾಪ್ತ ಬಾಲಕಿಯ ಕತ್ತು ಸೀಳಿ ಹತ್ಯೆ!

- Advertisement -
- Advertisement -

ದಾದರ್ ಮತ್ತು ನಗರ ಹವೇಲಿ: ಅತ್ಯಾಚಾರ ಮಾಡಲು ಸಹಕರಿಸದ ಕಾರಣ ವ್ಯಕ್ತಿಯೋರ್ವ 4 ವರ್ಷದ ಬಾಲಕಿಯ ಕತ್ತು ಸೀಳಿ ಹತ್ಯೆಗೈದ ಘಟನೆ ಕೇಂದ್ರಾಡಳಿತ ಪ್ರದೇಶವಾದ ದಾದರ್ ಮತ್ತು ನಗರ ಹವೇಲಿಯಲ್ಲಿ ನಡೆದಿದೆ.

ಆರೋಪಿಯನ್ನು ಸಂತೋಷ್ ರಜತ್‌ (30) ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಮನೆಯ ಹೊರಗೆ ಆಟ ಆಡುತ್ತಿದ್ದ ಸಂದರ್ಭ ಆರೋಪಿ ರಜತ್‌ ಬಾಲಕಿಯನ್ನು ತನ್ನ ಅಪಾರ್ಟ್‌ಮೆಂಟ್‌‌ಗೆ ಕರೆದೊಯ್ದು, ಅತ್ಯಾಚಾರಕ್ಕೆ ಯತ್ನಿಸಿದ್ದ.

ಈ ವೇಳೆ ಬಾಲಕಿ ಅಳಲಾರಂಭಿಸಿದ್ದು, ರಜತ್‌ ಆಕೆಯ ಕತ್ತು ಸೀಳಿ ಹತ್ಯೆಗೈದಿದ್ದಾನೆ. ಬಳಿಕ ಬಾಲಕಿಯ ಮೃತದೇಹವನ್ನು ಚೀಲದಲ್ಲಿ ಕಟ್ಟಿ ತನ್ನ ಶೌಚಾಲಯದ ಕಿಟಕಿ ಒಡೆದು ಹೊರಗೆ ಬಿಸಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿ ಕಾಣೆಯಾದ ಕಾರಣ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಫ್ಲ್ಯಾಟ್‌ಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭ ರಜತ್‌‌‌‌‌‌ನ ಮನೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ರಜತ್‌ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!