- Advertisement -
- Advertisement -
ಮಂಗಳೂರು: ಹಿಂದೂ ಯುವಸೇನೆ, ವೃಕ್ಷರಾಜ ಶಾಖೆ, ವೃಕ್ಷರಾಜ ಫ್ರೆಂಡ್ಸ್ ಕ್ಲಬ್ ಗ್ರಾಮೀಣಾಭಿವೃದ್ಧಿ ಕೇಂದ್ರ (ರಿ) ವತಿಯಿಂದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರಪದವಿನಲ್ಲಿ 19 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾರ್ವಜನಿಕ ಶನೈಶ್ವರ ಪೂಜೆ, ವೃಕ್ಷರಾಜ ಸಭಾಭವನ ಉದ್ಘಾಟನೆ ಹಾಗೂ ಬೃಹತ್ ರಕ್ತದಾನ ಶಿಬಿರದಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಭಾಗವಹಿಸಿದರು.


ವೃಕ್ಷರಾಜ ಸಭಾಭವನ ಉದ್ಘಾಟಿಸಿದ ಶಾಸಕರನ್ನು ಸಂಘಟನೆಯ ವತಿಯಿಂದ ಪ್ರಮುಖರು ಸನ್ಮಾನಿಸಿದರು. ಹಿಂದೂ ಯುವಸೇನೆಯ ಗೌರವ ಅಧ್ಯಕ್ಷರಾದ ಭಾಸ್ಕರ್ ಚಂದ್ರ ಶೆಟ್ಟಿ, ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯಶೋಧರ್ ಚೌಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಸತೀಶ್ ಶೆಟ್ಟಿ, ಪ್ರವೀಣ್ ಆಳ್ವ, ಪ್ರೇಮ್ ಕುಮಾರ್, ರಾಜರತ್ನ ಸನಿಲ್, ನಿಶಾಂತ್ ಜಪ್ಪಿನಮೊಗರು, ನಿತೇಶ್ ಒಂಟೆಮಾರ್, ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಝೀನತ್, ಕಿಶೋರ್ ಬೆಲ್ಚಡ ಉಪಸ್ಥಿತರಿದ್ದರು.


- Advertisement -