- Advertisement -
- Advertisement -






ಕಿನ್ಶಾಸಾ: ಆಫ್ರಿಕಾದ ದೇಶಗಳಾದ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ರೋಗಕ್ಕೆ 88 ಜನ ಬಲಿಯಾಗಿದ್ದಾರೆ. 300ಕ್ಕೂ ಹೆಚ್ಚು ಜನರಿಗೆ ಎಬೋಲಾ ಸೋಂಕು ಹಬ್ಬಿರುವ ಶಂಕೆ ವ್ಯಕ್ತವಾಗಿದೆ.
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ. ಕಾಂಗೋದ ಪೂರ್ವ ಪ್ರಾಂತ್ಯವಾದ ಇಟುರಿ ಸಾಂಕ್ರಾಮಿಕದ ಕೇಂದ್ರಬಿಂದುವಾಗಿದೆ. ಇಲ್ಲಿಗೆ ಸುಮಾರು 1,000 ಕಿ.ಮೀ ದೂರದಲ್ಲಿರುವ ಕಾಂಗೋ ರಾಜಧಾನಿ ಕಿನ್ಯಾಸಾದ ವ್ಯಕ್ತಿಯೊಬ್ಬ ಭೇಟಿ ನೀಡಿದ್ದ. ಈಗ ಆತನಿಗೆ ಎಬೋಲಾ ಹರಡಿರುವುದು ದೃಢಪಟ್ಟಿದೆ.
ಎಬೋಲಾ ಸೋಂಕು ಬುಂಡಿಬುಗ್ಯ ವೈರಸ್‌ನಿಂದ ಹರಡುತ್ತದೆ. ಪ್ರಾಣಿಗಳಲ್ಲಿ ಹರಡಿ ನಂತರ ಮನುಷ್ಯನಿಗೆ ಈ ಸೋಂಕು ಹಬ್ಬುತ್ತದೆ. ಈ ಸೋಂಕು ತಗುಲಿದ ವ್ಯಕ್ತಿಗೆ ತೀವ್ರವಾದ ಜ್ವರ, ತಲೆನೋವು ಮತ್ತು ಮೈಕೈ ನೋವು, ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸೋಂಕಿಗೆ ಲಸಿಕೆ ಲಭ್ಯವಿಲ್ಲ ಎಂದು ತಿಳಿದು ಬಂದಿದೆ.
- Advertisement -








